ಮೊಬೈಲ್ ನಲ್ಲಿ ಇಂಟರ್ನೆಟ್ ಸೌಕರ್ಯ ಬಂದಾಗಿನಿಂದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಿಹೋಗಿವೆ. ತಮಾಷೆಯ, ಜಗಳದ, ಅನಾಹುತದ ವಿಡಿಯೋಗಳು ಪ್ರತಿನಿತ್ಯ ಮೊಬೈಲ್ ನಲ್ಲಿ ಕಾಣಿಸಿಕೊಳ್ತಿರ್ತವೆ.
ಅಂತಹ ವಿಡಿಯೊವೊಂದರಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನನ್ನು ರಕ್ಷಿಸಲು ಅಂಗಡಿಯವನಿಗೆ ಬೆದರಿಕೆ ಹಾಕಿದ್ದು ಆತನನ್ನು ಹೆದರಿಸುತ್ತಿದ್ದಾಳೆ. ಹುಡುಗಿ ತನ್ನ ಗೆಳೆಯನಿಗಾಗಿ ಜಗಳವಾಡುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ಹುಡುಗಿ ಮತ್ತು ಆಕೆಯ ಗೆಳೆಯ ಅಂಗಡಿಯವನೊಂದಿಗೆ ಜಗಳವಾಡುತ್ತಿದ್ದು ಯಾವ ಕಾರಣಕ್ಕಾಗಿ ಜಗಳ ವಾಡುತ್ತಿದ್ದಾರೆ ಮತ್ತು ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ ಜಗಳದಲ್ಲಿ ತನ್ನ ಗೆಳೆಯನನ್ನು ಉಳಿಸಲು ಹುಡುಗಿ ಅಂಗಡಿಯವನು ಮತ್ತು ಇತರ ಪುರುಷರೊಂದಿಗೆ ತೀವ್ರವಾಗಿ ಹೋರಾಡುತ್ತಿರುವುದನ್ನು ಕಾಣಬಹುದು.
ತನ್ನ ಗೆಳೆಯನನ್ನು ರಕ್ಷಿಸುವಾಗ ಹುಡುಗಿ ಜೋರಾಗಿ “ತುಜೆ ಪತಾ ಹೈ ಸೆಂಟ್ರಲ್ ಗವರ್ನಮೆಂಟ್ ಹೂ ಮೈ” ಎಂದು ಕೂಗುತ್ತಾಳೆ. ಆ ನಂತರ ಅಂಗಡಿಯವನು ನಿಲ್ಲಿಸದೆ ಆಕೆಯ ಪ್ರಿಯಕರನೊಂದಿಗೆ ಜಗಳ ಮುಂದುವರಿಸಿದಾಗ ತನ್ನ ಬಾಯ್‌ಫ್ರೆಂಡ್‌ನನ್ನು ಉಳಿಸಲು ಸಂಪೂರ್ಣವಾಗಿ ಹೋರಾಟಕ್ಕಿಳಿಯುತ್ತಾಳೆ. ತನ್ನ ಗೆಳೆಯ ವೈದ್ಯ ಎಂದು ಮತ್ತೊಮ್ಮೆ ಕೂಗುತ್ತಾಳೆ. ಆದಾಗ್ಯೂ ಸ್ವಲ್ಪ ಸಮಯದ ನಂತರ ಅವರ ಜಗಳ ಕೊನೆಗೊಳ್ಳುತ್ತದೆ.
ಹುಡುಗಿಯ ಹೋರಾಟವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು ಮುದ್ದಾದ ವಿಡಿಯೋ ಎಂದಿದ್ದಾರೆ.
https://twitter.com/gharkekalesh/status/1807370861583983078?ref_src=twsrc%5Etfw%7Ctwcamp%5Etweetembed%7Ctwterm%5E1807370861583983078%7Ctwgr%5Edb52607fdd22903f69a2446a09d1f3c43a87a6ce%7Ctwcon%5Es1_&ref_url=https%3A%2F%2Fm.dailyhu