ಹಾಡಹಗಲೇ ಸ್ನೇಹಿತೆಯಿಂದ ಶಾಲಾ ವಿದ್ಯಾರ್ಥಿನಿ ಅಪಹರಣ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಈ ಕಾಲದಲ್ಲಿ ಯಾರನ್ನೂ ನಂಬುವಂತೆಯೇ ಇಲ್ಲ. ಪರಿಚಿತರು, ಸ್ನೇಹಿತರು ಕೂಡ ಎಂತಹ ಮೋಸ ಮಾಡುತ್ತಾರೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. ವಿಡಿಯೋದಲ್ಲಿನ ದೃಶ್ಯ ಎಂತವರನ್ನೂ ಭಯಭೀತರನ್ನಾಗಿಸುತ್ತದೆ.

ಶಾಲೆಯಿಂದ ಮನೆಯತ್ತ ಹೊರಟಿದ್ದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತೆ ತನ್ನ ಬಾಯ್ ಫ್ರೆಂಡ್ ಜೊತೆ ಬೈಕ್ ನಲ್ಲಿ ನಲ್ಲಿ ಹೋಗುವಾಗ ನಿಲ್ಲಿಸಿ ಮಾತನಾಡಿಸಿದ್ದಾಳೆ. ಹೀಗೆ ಮಾತನಾಡುತ್ತ ಯುವತಿ‌, ವಿದ್ಯಾರ್ಥಿನಿಯ ಮೂಗಿಗೆ ಕರವಸ್ತ್ರದಂತಹ ವಸ್ತುವನ್ನು ಹಿಡಿದಿದ್ದಾಳೆ.

ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆಕೆಯನ್ನು ಬೈಕ್ ನ ಮಧ್ಯದಲ್ಲಿ ಕೂರಿಸಿಕೊಂಡು ತೆರಳಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಅಲ್ಲದೇ ಬೈಕ್ ನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಯುವಕ ಹಾಗೂ ಯುವತಿ, ವಿದ್ಯಾರ್ಥಿನಿಯನ್ನು ಒಂದು ರೂಮಿಗೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹಿಂಬಾಲಿಸಿಕೊಂಡು ಹೋದವರು ರೂಮಿನ ಬಾಗಿಲು ತೆರೆದು ಒಳನುಗ್ಗಿ ಯುವಕ-ಯುವತಿಗೆ ಹಿಗ್ಗಾಮುಗ್ಗಾ ಥಳಿಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೋ ʼಸ್ಕ್ರಿಪ್ಟೆಡ್‌ʼ ಎಂದು ಕೆಲವರು ಅಭಿಪ್ರಾಯಪಟ್ಟಿರುವವರಾದರೂ ಈ ಕಾಲದಲ್ಲಿ ಸ್ನೇಹಿತರಾಗಿರಲಿ, ಪರಿಚಯದವರೇ ಆಗಿರಲಿ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಒಳಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read