ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ರಸ್ತೆಯಲ್ಲೇ ಕಿತ್ತಾಡುವ ಪ್ರಸಂಗಗಳು ಹೆಚ್ಚಾಗುತ್ತಿದ್ದು ಇಂಥದ್ದೇ ಮತ್ತೊಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಅದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಓರ್ವ ಹುಡುಗನಿಗಾಗಿ ಕಿತ್ತಾಡಿಕೊಂಡಿದ್ದಾರೆ. ವೀಡಿಯೊದಲ್ಲಿ ಹುಡುಗಿಯರು ತೀವ್ರವಾದ ವಾದ ನಡೆಸುತ್ತಾ ಜಗಳವಾಡಿದ್ದಾರೆ.
ವಾಗ್ವಾದ ಹೆಚ್ಚಾದಂತೆ ಗಲಾಟೆ ದೈಹಿಕ ಹಿಂಸೆಗೆ ತಿರುಗಿದೆ. ಸಾರ್ವಜನಿಕ ಪ್ರದೇಶದಲ್ಲೇ ಜುಟ್ಟು ಹಿಡಿದುಕೊಂಡು ದೈಹಿಕವಾಗಿ ಹಲ್ಲೆಗೆ ಮುಂದಾಗಿದ್ದಾರೆ. ಈ ಘಟನೆಯು ಚರ್ಚೆ ಮತ್ತು ಟೀಕೆಯನ್ನು ಹುಟ್ಟುಹಾಕಿದೆ.
ಶೈಕ್ಷಣಿಕ ಸ್ಥಳಗಳಲ್ಲಿ ಸಂಬಂಧಗಳು ಮತ್ತು ಭಾವನೆಗಳನ್ನು ನಿರ್ವಹಿಸುವುದರಲ್ಲಿನ ವೈಫಲ್ಯ, ಯುವಜನತೆ ನಡುವೆ ಪರಸ್ಪರ ವೈಷಮ್ಯ ಸಾಮಾನ್ಯವಾಗಿದ್ದು ಭಾವನೆಗಳನ್ನು ಕೆರಳಿಸಿ ಬಿಡುವ ಅಪಾಯಗಳ ಕುರಿತು ಗಂಭೀರವಾದ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿರುವ ಹುಡುಗಿಯರ ಗುರುತು ಪತ್ತೆಯಾಗಿಲ್ಲದಿದ್ದರೂ ಈ ಘಟನೆಯು ವಯಸ್ಕರಲ್ಲಿ ಒತ್ತಡ, ಅಸೂಯೆ ಮತ್ತು ಪೈಪೋಟಿಯ ಬಗ್ಗೆ ಇರುವ ಕಳವಳವನ್ನು ವ್ಯಕ್ತಪಡಿಸಿದೆ.
Kalesh b/w Two Girls on Road
pic.twitter.com/l1tA4HLyGC— Ghar Ke Kalesh (@gharkekalesh) May 6, 2024