ಮೊಸಳೆಯ ದವಡೆಯಿಂದ ನಾಯಿಯೊಂದು ಪವಾಡ ಸದೃಶ್ಯವಾಗಿ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮೊಸಳೆಯ ಬಾಯಿಗೆ ಪ್ರಾಣಿಯೊಂದು ಬಿದ್ದರೆ ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ, ಈ ನಾಯಿ ಮಾತ್ರ ಅದೃಷ್ಟವಶಾತ್ ಬದುಕುಳಿದಿದೆ.
ಈ ವೈರಲ್ ವಿಡಿಯೋದಲ್ಲಿ, ನಾಯಿಯೊಂದು ನೀರಿನ ಬಳಿ ಆಡುತ್ತಿರುತ್ತದೆ. ಆಗ ನೀರಿನಲ್ಲಿ ಅಡಗಿದ್ದ ಮೊಸಳೆ ಇದ್ದಕ್ಕಿದ್ದಂತೆ ನಾಯಿಯ ಮೇಲೆ ದಾಳಿ ಮಾಡಿ ತನ್ನ ಬಾಯಿಗೆ ಹಾಕಿಕೊಳ್ಳುತ್ತದೆ. ಕೆಲ ಕ್ಷಣಗಳ ಕಾಲ ನಾಯಿ ಮೊಸಳೆಯ ದವಡೆಯಲ್ಲಿ ಸಿಲುಕಿಕೊಂಡಿರುತ್ತದೆ. ಆದರೆ, ಕ್ಷಣಾರ್ಧದಲ್ಲಿ ನಾಯಿ ಮೊಸಳೆಯ ಹಿಡಿತದಿಂದ ತಪ್ಪಿಸಿಕೊಂಡು ಓಡಿಹೋಗುತ್ತದೆ.
ಈ ವಿಡಿಯೋವನ್ನು ‘sertaoemdia’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಈ ವಿಡಿಯೋ 33,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ನಾಯಿಯ ಅದೃಷ್ಟವನ್ನು ಹೊಗಳಿದ್ದಾರೆ, ಇನ್ನೂ ಕೆಲವರು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಟೀಕಿಸಿದ್ದಾರೆ.