ಚೀನಾ ಕಂಪನಿಯಿಂದ ಉದ್ಯೋಗಿಗಳಿಗೆ ಬಂಪರ್;‌ ʼಬೋನಸ್‌ʼ ರೂಪದಲ್ಲಿ ಕೋಟ್ಯಾತರ ರೂ. ತೆಗೆದುಕೊಳ್ಳಲು ಅವಕಾಶ | Video

ಚೀನಾದ ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ತನ್ನ ಉದ್ಯೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಬೋನಸ್ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಕಂಪನಿಯು ಒಂದು ದೊಡ್ಡ ಟೇಬಲ್ ಮೇಲೆ ಕೋಟ್ಯಾಂತರ ರೂಪಾಯಿ ನಗದನ್ನು ಹರಡಿ, ಉದ್ಯೋಗಿಗಳಿಗೆ 15 ನಿಮಿಷಗಳಲ್ಲಿ ಅವರು ಎಷ್ಟು ಹಣ ಎಣಿಸಬಹುದೋ ಅಷ್ಟನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವರು ಈ ಕ್ರಮವನ್ನು ಮೆಚ್ಚಿದರೆ, ಇನ್ನೂ ಕೆಲವರು ಇದನ್ನು ವಿಚಿತ್ರ ಎಂದು ಕರೆದಿದ್ದಾರೆ. ಕೆಲವರು ಈ ರೀತಿಯ ಬೋನಸ್‌ ಬದಲಾಗಿ ಪ್ರತಿಯೊಬ್ಬ ಉದ್ಯೋಗಿಯ ಖಾತೆಗೆ ಹಣ ಜಮಾ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಾಯಿತು ?

ಹೆನಾನ್ ಮೈನಿಂಗ್ ಕ್ರೇನ್ ಕಂಪನಿಯು ತನ್ನ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್‌ ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ನೀಡಲು ನಿರ್ಧರಿಸಿತ್ತು.

ಒಂದು ದೊಡ್ಡ ಟೇಬಲ್ ಮೇಲೆ ಲಕ್ಷಾಂತರ ಯುವಾನ್ ಮೌಲ್ಯದ ನಗದನ್ನು ಹರಡಲಾಗಿದ್ದು, ಉದ್ಯೋಗಿಗಳಿಗೆ 15 ನಿಮಿಷಗಳಲ್ಲಿ ಅವರು ಎಷ್ಟು ಹಣ ಎಣಿಸಬಹುದೋ ಅಷ್ಟನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕೆಲವರು ಈ ಕ್ರಮವನ್ನು ಮೆಚ್ಚಿದರೆ, ಇನ್ನೂ ಕೆಲವರು ಇದನ್ನು ವಿಚಿತ್ರ ಎಂದು ಕರೆದಿದ್ದಾರೆ. ಕೆಲವರು ಈ ರೀತಿಯ ಬೋನಸ್‌ ಬದಲಾಗಿ ಪ್ರತಿಯೊಬ್ಬ ಉದ್ಯೋಗಿಯ ಖಾತೆಗೆ ಹಣ ಜಮಾ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವರು ಕಂಪನಿಯ ಈ ಕ್ರಮವನ್ನು ತಂಡದ ಬಾಂಧವ್ಯವನ್ನು ಬಲಪಡಿಸುವ ಬದಲು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಕ್ರಮ ಎಂದು ಹೇಳಿದ್ದಾರೆ.

 

View this post on Instagram

 

A post shared by Mothership (@mothershipsg)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read