ಸಿನಿಮಾ ಸ್ಟೈಲ್ ನಲ್ಲಿ ಶಾಲಾ ವಿದ್ಯಾರ್ಥಿನಿಯರ ಫೈಟ್; ವಿಡಿಯೋ ‘ವೈರಲ್’

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ವಿಡಿಯೋ ಒಂದು ಫುಲ್ ವೈರಲ್ ಆಗಿದ್ದು, ಇದರಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಹಾಡಹಗಲೇ ನಡುರಸ್ತೆಯಲ್ಲಿ ಸಿನಿಮಾ ಶೈಲಿಯಲ್ಲಿ ಫೈಟ್ ಮಾಡಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ದಾರಿಹೋಕರು ಇವರುಗಳ ಜಗಳ ಬಿಡಿಸುವ ಬದಲು ವಿಡಿಯೋ ಮಾಡಿಕೊಂಡು ನಿಂತಿದ್ದಾರೆ.

ಈ ವಿಡಿಯೋವನ್ನು ಮೊದಲು ರೆಡ್ಡಿಟ್ ನಲ್ಲಿ ಹಾಕಲಾಗಿದ್ದು ಅದನ್ನು ‘ಘರ್ ಕಾ ಕಾಲೇಶ್’ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ‘ಎಕ್ಸ್’ ನಲ್ಲಿ ಹಾಕಿದ್ದಾರೆ. ಕ್ಷಣಾರ್ಧದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೇ ಇದನ್ನು ನೋಡಿದವರು ವಿಧವಿಧವಾದ ಕಮೆಂಟ್ ಹಾಕುತ್ತಿದ್ದಾರೆ.

ವಿಡಿಯೋದಲ್ಲಿ ಕಂಡು ಬರುವಂತೆ ಈ ಇಬ್ಬರೂ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರದಲ್ಲಿಯೇ ಇದ್ದು, ಆದರೆ ಇಬ್ಬರ ಸಮವಸ್ತ್ರ ವಿಭಿನ್ನವಾಗಿ ಇರುವ ಕಾರಣ ಬಹುಶಃ ಬೇರೆ ಬೇರೆ ಶಾಲೆಯವರು ಇರಬೇಕೆಂದು ಕಾಣಿಸುತ್ತದೆ. ಈ ಇಬ್ಬರು ವಿದ್ಯಾರ್ಥಿನಿಯರು ಯಾವ ಕಾರಣಕ್ಕೆ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿಲ್ಲ.

ಇದನ್ನು ವೀಕ್ಷಿಸಿರುವ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ್ಯ ಮಾಡುತ್ತಾ ಕಮೆಂಟ್ ಗಳನ್ನು ಹಾಕುತ್ತಿದ್ದು, ಆದರೆ ಬಹುತೇಕರು ಇನ್ನೂ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವಂತೆ ಕಾಣುವ ಈ ವಿದ್ಯಾರ್ಥಿನಿಯರು ಈಗಲೇ ಅಕ್ರಮಣಕಾರಿ ವರ್ತನೆ ತೋರಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಈ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಕೊಡಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

https://twitter.com/gharkekalesh/status/1824649146135089422?ref_src=twsrc%5Etfw%7Ctwcamp%5Etweetembed%7Ctwterm%5E1824649146135089422%7Ctwgr%5E616107cbaa79acf8a8079f43939a9cb30113e0d7%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpin

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read