ಸ್ನೇಹಿತ/ಸ್ನೇಹಿತೆ ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಪ್ರಮುಖ ಪಾತ್ರ. ಮನುಷ್ಯರಿಗೆ ಮಾತ್ರ ಸ್ನೇಹದ ಬೆಲೆ ಗೊತ್ತಿರುತ್ತೆ ಅಂತ ಅಂದ್ಕೊಳ್ಳೊ ಹಾಗಿಲ್ಲ. ಯಾಕೆಂದ್ರೆ ಮಾತೇ ಬರದ ಮೂಕ ಜೀವಿಗಳಾದ ಪ್ರಾಣಿಗಳಿಗೂ ಸ್ನೇಹದ ಭಾಷೆ ಗೊತ್ತಿರುತ್ತೆ. ಅದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೊ.
ಇಲ್ಲಿ ನಾಯಿಗಳೆರಡು ಕೋತಿ ಮರಿಯೊಂದಿಗೆ ನಡೆದುಕೊಳ್ತಿರೊ ರೀತಿ ಹೇಗಿದೆ ನೋಡಿದ್ರಾ..! ಅಚ್ಚರಿ ಆಗ್ಬಹುದು ಈ ಕೋತಿ ಮರಿಯೊಂದನ್ನ ಬೆನ್ನಮೇಲೆ ಕುರಿಸಿಕೊಂಡು ಈ ಎರಡು ನಾಯಿಗಳು ಆಟ ಆಡ್ತಿವೆ. ಒಂದು ನಾಯಿ ಈ ಕೋತಿಮರಿಯನ್ನ ಹೊತ್ಕೊಂಡು ಬಂದು, ಇನ್ನೊಂದು ನಾಯಿಯ ಬೆನ್ನ ಮೇಲೆ ಏರಿ ಕುಳಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತೆ. ಅದು ಕೂಡ ಬೆನ್ನಮೇಲೆ ಏರಿಸಿಕೊಂಡು ಆ ನಂತರ ನಿಧಾನಕ್ಕೆ ಕೆಳಗೆ ಇಳಿಸುತ್ತದೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೀದಿನಾಯಿ ಹಾಗೂ ಕೋತಿ ಮರಿಯ ಈ ಗೆಳೆತನ ನೋಡಿ ನೆಟ್ಟಿಗರು ಫುಲ್ ಫಿದಾ ಆಗ್ಹೋಗಿದ್ದಾರೆ.
ವಿದಿತ್ ಶರ್ಮಾ ಅನ್ನುವವರು ತಮ್ಮ ಟ್ಟಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. 21 ಸೆಕೆಂಡ್‌ನ ಈ ವಿಡಿಯೋ ನೋಡಿದವರೆಲ್ಲ ಬೆರಗಾಗಿದ್ದಾರೆ ಹಾಗೂ ಪ್ರಾಣಿಗಳ ನಡುವೆ ಇರುವ ಅನ್ಯೋನ್ಯತೆ ಮನುಷ್ಯರಿಗಿಲ್ಲ. ಇವುಗಳ ಬಾಂಧವ್ಯ ನೋಡಿ ಮನುಷ್ಯರು ಕಲಿಯಬೇಕಾಗಿರುವುದು ತುಂಬಾ ಇದೆ ಎಂದು ತುಂಬಾ ಜನರು ಕಾಮೆಂಟ್ ಮಾಡಿದ್ದಾರೆ.
https://twitter.com/TheViditsharma/status/1688598041845276672?ref_src=twsrc%5Etfw%7Ctwcamp%5Etweetembed%7Ctwterm%5E1688598041845276672%7Ctwgr%5E415d33e4c44c16f426472e2d60dc23dea2987ee9%7Ctwcon%5Es1_&ref_url=https%3A%2F%2Fwww.news18.com%2Fviral%2Fwatch-monkey-takes-a-piggyback-ride-on-dogs-in-this-adorable-video-8529603.html