ಅಮೀರ್ ಖಾನ್ ಹೊಸ ಅವತಾರ: ಮುಂಬೈ ಬೀದಿಗಳಲ್ಲಿ ಭಿಕಾರಿಯಂತೆ ಸಂಚಾರ | Video

ಮುಂಬೈನ ಅಂಧೇರಿಯಲ್ಲಿ ವಿಚಿತ್ರ ವೇಷಧಾರಿ ವ್ಯಕ್ತಿಯೊಬ್ಬರು ತಿರುಗಾಡುತ್ತಿರುವುದು ಕಂಡುಬಂದಿದೆ. ಹರಿದ ಬಟ್ಟೆ, ಗಡ್ಡ, ತಲೆಗೂದಲು ಬೆಳೆಸಿಕೊಂಡು ಭಿಕಾರಿಯಂತೆ ಕಾಣುತ್ತಿದ್ದ ಈ ವ್ಯಕ್ತಿಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದು, ಹತ್ತಿರದಿಂದ ನೋಡಿದಾಗ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಆಮೀರ್ ಖಾನ್ ಎಂದು ತಿಳಿದುಬಂದಿದೆ.

ಆಮೀರ್ ಖಾನ್ ಕೈಗಾಡಿಯನ್ನು ತಳ್ಳುತ್ತಾ, ರಿಕ್ಷಾಗಳ ನಡುವೆ ಸಾಮಾನ್ಯ ಜನರಂತೆ ನಡೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾರೂ ಅವರನ್ನು ಗುರುತಿಸಿಲ್ಲ ಎಂಬುದು ವಿಶೇಷ.

ಆದರೆ, ಈ ವೇಷದ ಗುಟ್ಟು ರಟ್ಟಾಗಿದ್ದು ಹೇಗೆ ? ಆಮೀರ್ ಖಾನ್ ಭಿಕಾರಿಯಾಗಿ ಬದಲಾಗುವ ದೃಶ್ಯಗಳುಳ್ಳ ಬಿಹೈಂಡ್ ದ ಸೀನ್ಸ್ (ಬಿಟಿಎಸ್) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ವಿಡಿಯೋದಲ್ಲಿ ಆಮೀರ್ ಖಾನ್ ವಿಗ್, ಗಡ್ಡ ಮತ್ತು ಪ್ರೊಸ್ಥೆಟಿಕ್ಸ್ ಬಳಸಿ ಭಿಕಾರಿಯಂತೆ ಬದಲಾಗುವುದನ್ನು ಕಾಣಬಹುದು.

ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಆಮೀರ್ ಖಾನ್ ಅವರ ಹೊಸ ಚಿತ್ರದ ಪ್ರಚಾರ ತಂತ್ರವಿರಬಹುದು ಎಂದು ಹಲವರು ಅನುಮಾನಿಸಿದ್ದಾರೆ. “ಟಾಮ್ ಹ್ಯಾಂಕ್ಸ್ ಚಿತ್ರದ ರಿಮೇಕ್‌ನಲ್ಲಿ ಆಮಿರ್ ನಟಿಸುತ್ತಿರಬಹುದು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

“ಇದು ಅವರ ಮುಂದಿನ ಬಿಡುಗಡೆಗೆ ಕ್ರೇಜ್ ಹುಟ್ಟುಹಾಕುವ ತಂತ್ರ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಅವರು ಕೋಲ್ಕತ್ತಾದಲ್ಲಿಯೂ ಇದೇ ರೀತಿ ಮಾಡಿದ್ದರು. ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ” ಎಂದು ಇನ್ನೊಬ್ಬರು ಹೇಳಿದ್ದಾರೆ.

“ಜನರು ‘ಏನೋ ನಡೀತಿದೆ ಬಿಡು’ ಅಂತ ಸುಮ್ಮನಾದ್ರು” ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. “ಸಿನಿಮಾಗಳು ನಡೆಯುವುದಿಲ್ಲ, ಏನಾದರೂ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಬೇಕು” ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು ಆಮೀರ್ ಖಾನ್, ಅಕ್ಷಯ್ ಕುಮಾರ್ ಅವರಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಮೀರ್ ಖಾನ್ “ಸಿತಾರೆ ಜಮೀನ್ ಪರ್” ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು 2007 ರಲ್ಲಿ ಬಿಡುಗಡೆಯಾದ “ತಾರೆ ಜಮೀನ್ ಪರ್” ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ದರ್ಶೀಲ್ ಸಫಾರಿ ಮತ್ತು ಜೆನೆಲಿಯಾ ಡಿಸೋಜಾ ಕೂಡ ನಟಿಸಿದ್ದಾರೆ. ಈ ಚಿತ್ರವು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ “ಭಿಕಾರಿ” ಪ್ರಚಾರ ತಂತ್ರವು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read