ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಟ್ರಾಫಿಕ್ ಬಿಸಿ ಅನುಭವಿಸದವರಿಲ್ಲ. ವಧುವಿಗೂ ಇದರ ಅನುಭವವಾಗಿದ್ದು ನವವಧು ತನ್ನ ಮದುವೆಗೆ ಕಾರ್ ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ತನ್ನ ಮದುವೆಯ ದಿನದಂದು ವಧು ಟ್ರಾಫಿಕ್ ಜಾಂ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಕಾರ್ ಬಿಟ್ಟು ಮೆಟ್ರೋ ಹತ್ತಿದ್ದಾರೆಂಬ ವಿಷಯದೊಂದಿಗೆ ವಿಡಿಯೋ ಹರಿದಾಡ್ತಿದೆ.
ಮದುವೆ ಮೇಕಪ್ ನೊಂದಿಗೆ ಆಭರಣ ಧರಿಸಿರುವ ವಧು ಮೆಟ್ರೋ ಹತ್ತಿ ಮದುವೆ ಮಂಟಪ ತಲುಪಿದ್ದಾರೆ. ಈಕೆಯ ಬುದ್ಧಿವಂತಿಕೆಯನ್ನ ಜನ ಮೆಚ್ಚಿಕೊಂಡಿದ್ದು ಸ್ಮಾರ್ಟ್ ವಧು ಎಂದು ಕೊಂಡಾಡಿದ್ದಾರೆ.
https://twitter.com/ForeverBLRU/status/1614888318646497281?ref_src=twsrc%5Etfw%7Ctwcamp%5Etweetembed%7Ctwterm%5E1614888318646497281%7Ctwgr%5E9587d8df09f00304b5d5dfcc63310d4dece0300f%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownewsenglish-epaper-tnneng%2Fwatchbengalurubridetakesmetroonherweddingdaytoavoidtrafficvideogoesviral-newsid-n463223978%3Fs%3Dauu%3D0x037a847978e4f65bss%3Dwspsm%3DY