ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್ ಆಗಿದ್ದೇ ತಪ್ಪಾಯ್ತು…… ಮಟನ್‌ – ಚಿಕನ್‌ ಆಹಾರ ʼಬಂದ್ʼ ಮಾಡುವ ಸ್ಥಿತಿಗೆ ತಲುಪಿದ ʻಕುಮಾರಿ ಆಂಟಿʼ

ಸಾಮಾಜಿಕ ಜಾಲತಾಣದಲ್ಲಿ ಅತಿ ಬೇಗ ಜನರು ಪ್ರಸಿದ್ಧಿ ಪಡೆಯುತ್ತಾರೆ. ಕೆಲ ವಿಡಿಯೋಗಳು ವೈರಲ್‌ ಆಗುವ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಸಾವಿರಾರು, ಲಕ್ಷಾಂತರ ಮಂದಿಯನ್ನು ತಲುಪುವ ದಾರಿ ಸಾಮಾಜಿಕ ಜಾಲತಾಣ ಮಾತ್ರ. ಪ್ರತಿ ದಿನ ಇದ್ರಲ್ಲಿ ಲಕ್ಷಾಂತರ ವಿಡಿಯೋಗಳು ಬರ್ತಿರುತ್ತವೆ.

ಅದ್ರಲ್ಲಿ ಕೆಲ ವಿಡಿಯೋ ಆಹಾರಕ್ಕೆ ಸಂಬಂಧಿಸಿದವುಗಳಾಗಿರುತ್ತವೆ. ಯಾವ ಪ್ರದೇಶದಲ್ಲಿ ರುಚಿಯಾದ ಆಹಾರ ಸಿಗುತ್ತೆ ಎಂಬ ಸುದ್ದಿಗಳನ್ನು ನೀವು ನೋಡ್ತಾನೆ ಇರ್ತೀರಿ. ವಿಡಿಯೋದಲ್ಲಿ ನೋಡಿದ ಜಾಗವನ್ನು ನೆನಪಿಟ್ಟುಕೊಂಡು ಅಲ್ಲಿಗೆ ಹೋಗಿ, ಆಹಾರದ ರುಚಿ ನೋಡಿ ಬರೋದು ಇದ್ದಾರೆ. ಕುಮಾರಿ ಆಂಟಿ ಕೂಡ ಇವರಲ್ಲಿ ಒಬ್ಬರು.

ಹೈದ್ರಾಬಾದ್‌ ನಲ್ಲಿ ಕುಮಾರಿ ಆಂಟಿ ಬೀದಿ ಬದಿ ವ್ಯಾಪಾರ ಮಾಡ್ತಾರೆ. ಅವರ ಕೈನಿಂದ ತಯಾರಾಗುವ ಚಿಕನ್‌, ಮಟನ್‌ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದ್ರೆ ಇದೇ ಅವರಿಗೆ ಈಗ ಸಂಕಟ ತಂದಿದೆ. ತಮ್ಮ ಅಂಗಡಿಯನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಿರುವ ಕುಮಾರಿ ಆಂಟಿ ಅಂಗಡಿಗೆ ಬರ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಇದು ಟ್ರಾಫಿಕ್‌ ಪೊಲೀಸರಿಗೆ ಸಮಸ್ಯೆಯಾಗಿದೆ. ಅಲ್ಲಿ ಟ್ರಾಫಿಕ್‌ ಜಾಮ್‌ ಆಗ್ತಿದೆ. ಹಾಗಾಗಿ ಅಂಗಡಿ ತೆರವುಗೊಳಿಸುವಂತೆ ಪೊಲೀಸರು ಆಂಟಿಗೆ ಹೇಳಿದ್ದಾರೆ ಎನ್ನಲಾಗಿದೆ.

ಕುಮಾರಿ ಆಂಟಿ ಇತ್ತೀಚೆಗೆ ತನ್ನ ಅಂಗಡಿ ತೆರೆದಿಲ್ಲ. ಅನೇಕ ವರ್ಷಗಳಿಂದ ಇಲ್ಲಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗ್ತಿದ್ದಂತೆ ಆಕೆ ಅಂಗಡಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ದಿನ ದಿನಕ್ಕೂ ಆಂಟಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಕಾರಣ, ಅಂಗಡಿ ತೆರವುಗೊಳಿಸುವ ಸ್ಥಿತಿ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read