Video: ಮದುವೆಯಲ್ಲಿ ಉಡುಗೊರೆಯಾಗಿ ಬಂತು 35 ಅಡಿ ಉದ್ದದ ನೋಟಿನ ಹಾರ…!

ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿಯೊಬ್ಬರು ಮದುವೆ ದಿನದಂದು ತನ್ನ ಸಹೋದರನಿಗೆ ಉಡುಗೊರೆಯಾಗಿ ನೀಡಲು ಈ ವಿಶೇಷ ಹಾರವನ್ನು ಸಿದ್ಧಪಡಿಸಿದ್ದಾರೆ. ವರದಿಗಳ ಪ್ರಕಾರ, ಇದು ಒಂದು ಲಕ್ಷ ಪಾಕಿಸ್ತಾನಿ ರೂಪಾಯಿ ಮೌಲ್ಯದ ನೋಟುಗಳನ್ನು ಒಳಗೊಂಡಿದೆ. ಆಕರ್ಷಕ ಉಡುಗೊರೆಯನ್ನು 75 ರೂ.ಗಳ 200 ನೋಟುಗಳು ಮತ್ತು 50 ರೂ.ಗಳ 1700 ನೋಟುಗಳಿಂದ ಸಿದ್ದಪಡಿಸಲಾಗಿದೆ.

ಪಾಕಿಸ್ತಾನದ ಈ ವ್ಯಕ್ತಿ ಕರೆನ್ಸಿ ನೋಟುಗಳಿಂದ ನೇಯ್ದ 35 ಅಡಿ ಉದ್ದದ ಹಾರವನ್ನು ಭಕ್ಕರ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತನ್ನ ಸಹೋದರನಿಗೆ ಉಡುಗೊರೆಯಾಗಿ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಅತಿಥಿಗಳು ಮತ್ತು ಈಗ ನೆಟಿಜನ್‌ಗಳ ಗಮನ ಸೆಳೆದಿರುವ ಈ ಬೃಹತ್ ಹಾರವನ್ನು ವಿವಿಧ ಮುಖಬೆಲೆಯ ಸ್ಥಳೀಯ ಹಣದಿಂದ ಸಿದ್ಧಪಡಿಸಲಾಗಿದೆ. ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿ ಮದುವೆಯ ದಿನದಂದು ತನ್ನ ಸಹೋದರನಿಗೆ ಉಡುಗೊರೆಯಾಗಿ ನೀಡಲು ಈ ವಿಶೇಷ ಹಾರವನ್ನು ಸಿದ್ಧಪಡಿಸಿದ್ದರು.

ವರದಿಗಳ ಪ್ರಕಾರ, ಈ ಹಾರವು ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು, ಇದು ಒಂದು ಲಕ್ಷ ಪಾಕಿಸ್ತಾನಿ ರೂಪಾಯಿ ಮೌಲ್ಯದ ನೋಟುಗಳನ್ನು ಒಳಗೊಂಡಿದೆ. ಆಕರ್ಷಕ ಉಡುಗೊರೆಯನ್ನು 75 ರೂ.ಗಳ 200 ನೋಟುಗಳು ಮತ್ತು 50 ರೂ.ಗಳ 1700 ನೋಟುಗಳಿಂದ ಸಿದ್ದಪಡಿಸಲಾಗಿದ್ದು, ಹಾರವನ್ನು ರಚಿಸಲು ಸುಮಾರು 2,000 ಕರೆನ್ಸಿ ನೋಟುಗಳನ್ನು ಬಳಸಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read