Viral Video | ತಾಜ್ ಹೋಟೆಲ್‌ನಲ್ಲಿ ಚಹಾ ಸೇವಿಸುವ ಕನಸನ್ನು ನನಸಾಗಿಸಿಕೊಂಡ ಮಧ್ಯಮ ವರ್ಗದ ಯುವಕ

ಪ್ರತಿಯೊಬ್ಬರು ಐಷಾರಾಮಿ ಜೀವನ ನಡೆಸಬೇಕು ಎಂದು ಕನಸು ಕಾಣುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ಮನಸ್ಸು ಮಾಡಿದರೆ ಕಂಡ ಕನಸನ್ನು ಈಡೇರಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯೊಂದು ಇಲ್ಲಿದೆ.

ಮುಂಬೈನಲ್ಲಿರುವ ತಾಜ್ ಮಹಲ್ ಪ್ಯಾಲೇಸ್ ಭಾರತದ ಮೊದಲ 5-ಸ್ಟಾರ್ ಹೋಟೆಲ್ ಆಗಿದೆ. ಈ ಐಷಾರಾಮಿ ಹೋಟೆಲ್‌ನ ವೈಭವ ಮತ್ತು ಆತಿಥ್ಯವನ್ನು ಅನುಭವಿಸಲು ಒಮ್ಮೆಯಾದರೂ ಈ ಐಷಾರಾಮಿ ಹೋಟೆಲ್‌ಗೆ ಹೋಗಬೇಕೆಂದು ಅನೇಕರು ಕನಸು ಕಂಡಿದ್ದು, ಇದೇ ರೀತಿಯ ಕನಸು ಹೊಂದಿದ್ದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ವೀಡಿಯೊ ಸೃಷ್ಟಿಕರ್ತ ಅದ್ನಾನ್ ಪಠಾಣ್ ಕೊನೆಗೂ ಅದನ್ನು ಈಡೇರಿಸಿಕೊಂಡಿದ್ದಾರೆ.

ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಒಂದು ಕಪ್ ಚಹಾವನ್ನು ಸೇವಿಸುವ ತನ್ನ ಕನಸನ್ನು ನನಸಾಗಿಸಿಕೊಂಡ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ವೈರಲ್ ವೀಡಿಯೊವನ್ನು 20 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಮಾಡಲಾಗಿದೆ. ಅವರು ಹೋಟೆಲ್‌ಗೆ ಹೋಗಿ ಒಂದು ಕಪ್ ಚಹಾ ಕುಡಿಯಲು ಉತ್ಸುಕರಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವೈರಲ್ ವೀಡಿಯೊದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಕಾಮೆಂಟ್‌ಗಳ ವಿಭಾಗದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read