ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು

ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್​ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ.

ಕೋಲ್ಕತಾದ ಶೆರ್ವಾನಿ ಕಂಪೆನಿಯು ತಮ್ಮ ಜಾಹೀರಾತನ್ನು ‘ಮಿಸ್ಸಿಂಗ್’ ಕಾಲಮ್‌ನಂತೆ ಮುದ್ರಿಸುವ ಮೂಲಕ ಜನರನ್ನು ಅಚ್ಚರಿಗೊಳಿಸಿದೆ. ಕೋಲ್ಕತ್ತಾದ ಟೆಲಿಗ್ರಾಫ್ ಪತ್ರಿಕೆಯಲ್ಲಿ ಮುದ್ರಿತವಾದ ಜಾಹೀರಾತನ್ನು ‘ಮಿಸ್ಸಿಂಗ್’ ಅಂಕಣ ಎಂದು ಬರೆಯಲಾಗಿತ್ತು, ಅದು ನಂತರ ಸುಲ್ತಾನ್-ದಿ ಕಿಂಗ್ ಆಫ್ ಶೆರ್ವಾನಿಯ ಜಾಹೀರಾತಾಗಿರುವುದು ತಿಳಿದುಬಂದಿದೆ.

ಮುದ್ರಣ ಜಾಹೀರಾತಿನ ಚಿತ್ರವನ್ನು ಬಳಕೆದಾರರು ಜನವರಿ 14 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು 1,620 ಲೈಕ್‌ಗಳು ಮತ್ತು 160 ರಿಟ್ವೀಟ್‌ಗಳನ್ನು ಗಳಿಸಿದೆ. ಮಿಸ್ಸಿಂಗ್​ ಕಾಲಮ್​ ಸಾಮಾನ್ಯವಾಗಿ ಎಲ್ಲರ ಕಣ್ಣಿಗೆ ಹೋಗುತ್ತದೆ. ಅದರಲ್ಲಿಯೂ ದುಬಾರಿಯ ಶೆರ್ವಾನಿ ತೊಟ್ಟ ಯುವಕ ನಿಂತುಕೊಂಡಿರುವುದನ್ನು ನೋಡಿದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಓದುತ್ತಾರೆ. ಇದೇ ಕಾರಣಕ್ಕೆ ಇಂಥದ್ದೊಂದು ತಂತ್ರವನ್ನು ಮಾಡಿದ್ದಾರೆ.

https://twitter.com/ahmermkhan/status/1614117443626229763?ref_src=twsrc%5Etfw%7Ctwcamp%5Etweetembed%7Ctwterm%5E1614117443626229763%7Ctwgr%5E92bd47512b6384d75c87852b251e5775f3f72994%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-kolkata-companys-missing-print-advertisement-leaves-netizens-in-splits

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read