ಭಾವಪೂರ್ವಕವಾಗಿ ಹಾಡು ಹಾಡಿ ನಟ ಸತೀಶ್ ಕೌಶಿಕ್​ಗೆ ಶ್ರದ್ಧಾಂಜಲಿ

ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು.
ಈ ಕಲಾವಿದನ ನಿಧನಕ್ಕೆ ಹಲವು ಕಲಾವಿದರೂ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ. ಅವರಲ್ಲಿ ಬಿಹಾರದ ಗಾಯಕ ಅಮರಜೀತ್ ಜೈಕರ್ ಅವರು ಹಾಡಿನ ಮೂಲಕ ಸಂತಾಪ ಸೂಚಿಸಿದ್ದು, ಅದೀಗ ಭಾರಿ ವೈರಲ್​ ಆಗುತ್ತಿದೆ.

ಸತೀಶ್​ ಕೌಶಿಕ್​ ಅವರ ದಿಲ್ ದೇ ದಿಯಾ ಹೈ ಹಾಡಿನಿಂದ ರಾತ್ರೋರಾತ್ರಿ ಅವರು ಫೇಮಸ್​ ಆಗಿದ್ದರು. ಈ ಹಾಡನ್ನು ಈಗ ಹಲವರು ಹಾಡುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ. ಸತೀಶ್​ ಕೌಶಿಕ್​ ಅವರ ಇನ್ನೊಂದು ಖ್ಯಾತ ಹಾಡು ಚಿಟ್ಟಿ ನಾ ಕೋಯಿ ಸಂದೇಶ್ ಅನ್ನು ಅಮರಜೀತ್ ಜೈಕರ್ ಹಾಡುವ ಮೂಲಕ ಕಲಾವಿದನಿಗೆ ಗೌರವ ಸಲ್ಲಿಸಿದ್ದಾರೆ. ಇವರ ಭಾವಪೂರ್ಣ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ. ಅಮರ್​ಜೀತ್​ ಅವರು ಹಾಡಿದ್ದ ಈ ಹಾಡು 1998 ರ ದುಷ್ಮನ್ ಚಲನಚಿತ್ರದ್ದು. ಇದರಲ್ಲಿ ಕಾಜೋಲ್, ಸಂಜಯ್ ದತ್ ಮತ್ತು ಅಶುತೋಷ್ ರಾಣಾ ನಟಿಸಿದ್ದಾರೆ.

https://twitter.com/AmarjeetJaikar3/status/1633711572152635394?ref_src=twsrc%5Etfw%7Ctwcamp%5Etweetembed%7Ctwterm%5E1633711572152635394%7Ctwgr%5Ed6382abe184655db3ed4984559e7683f3fa448da%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-bihar-boy-amarjeet-jaikar-sings-chithi-na-koi-sandesh-as-he-pays-tribute-to-satish-kaushik-2344705-2023-03-10

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read