ನಾಳೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರ ಕಳೆದ ವರ್ಷ ಸೆಪ್ಟೆಂಬರ್ 22ರಂದು  ರಾಜ್ಯದ್ಯಂತ ತೆರೆಕಂಡಿತ್ತು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಫೈಟರ್ ನಾಳೆ  ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಉದಯ ವಾಹಿನಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ನಾಳೆ ಮಧ್ಯಾಹ್ನ 3:00 ಗಂಟೆಗೆ ಸಿನಿಮಾ ವೀಕ್ಷಿಸಬಹುದಾಗಿದೆ.

ನೂತನ್ ಉಮೇಶ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಸೇರಿದಂತೆ ಪಾವನ ಗೌಡ, ಲೇಖ ಚಂದ್ರ, ನಿರೋಷ, ಶರತ್ ಲೋಹಿತಾಶ್ವ, ರಾಜೇಶ್ ನಟರಂಗ, ಕೆ ಎಸ್ ಶ್ರೀಧರ್, ಕುರಿ ಪ್ರತಾಪ್, ಹಾಗೂ ಪವನ್ ಬಣ್ಣ ಹಚ್ಚಿದ್ದಾರೆ. ಕಟ್ಟಿಗೆನಹಳ್ಳಿ ಸೋಮಶೇಖರ್ ನಿರ್ಮಾಣ ಮಾಡಿದ್ದು, ಕೆ ಎಮ್ ಪ್ರಕಾಶ್ ಸಂಕಲನ, ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದಾರೆ.

https://twitter.com/UdayaTV/status/1806283425449414663

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read