ನಾನು ಆಸ್ಪತ್ರೆಯಲ್ಲಿದ್ದಾಗ ಪಿ.ಟಿ. ಉಷಾ ಬರೀ ಪೋಸು ಕೊಟ್ಟಿದ್ದರು, ಯಾವುದೇ ಬೆಂಬಲ ನೀಡಲಿಲ್ಲ: ವಿನೇಶ್ ಪೋಗಟ್ ಗಂಭೀರ ಆರೋಪ

ಚಂಡೀಗಢ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿ.ಟಿ. ಉಷಾ ಬರೀ ಪೋಸು ಕೊಟ್ಟಿದ್ದರು. ಅವರಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಖ್ಯಾತ ಕುಸ್ತಿಪಟು ವಿನೇಶ್ ಪೋಗಟ್ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ವಿನೇಶ್ ಪೋಗಟ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ಯಾಡಿಸ್ ಒಲಿಂಪಿಕ್ಸ್ ವೇಳೆ ಅಸ್ವಸ್ಥಗೊಂಡು ನಾನು ಆಸ್ಪತ್ರೆಯಲ್ಲಿದ್ದಾಗ ಅಲ್ಲಿಗೆ ಬಂದಿದ್ದ ಪಿ.ಟಿ. ಉಷಾ ಅವರು ನನಗೆ ಗೊತ್ತಿಲ್ಲದೆ ಫೋಟೋ ಕ್ಲಿಕ್ಕಿಸಿಕೊಂಡು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನನ್ನ ಬೆಂಬಲಕ್ಕೆ ನಿಂತಿರುವುದಾಗಿ ಪೋಸು ಕೊಟ್ಟಿದ್ದರು. ಆದರೆ, ಅವರಿಂದ ನನಗೆ ಯಾವ ಬೆಂಬಲವೂ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

50 ಕೆಜಿ ಕುಸ್ತಿ ಪಂದ್ಯದಲ್ಲಿ 100 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣ ವಿನೇಶ್ ಪೋಗಟ್ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು. ಕಾನೂನು ಹೋರಾಟ ನಡೆಸಿದರೂ ಅವರಿಗೆ ಬೆಳ್ಳಿ ಪದಕ ಸಿಗಲಿಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read