ವಿನಯ್ ರಾಜಕುಮಾರ್ ಅಭಿನಯದ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಲವರ್ ಬಾಯ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ವಿನಯ್ ರಾಜಕುಮಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನಾಳೆ ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ಚಿತ್ರವನ್ನು ಉದಯ್ ಸಿನಿ ವೆಂಚರ್ ಮತ್ತು ದೀಪಾ ಫಿಲಂಸ್ ಬ್ಯಾನರ್ ನಲ್ಲಿ ಉದಯ್ ಶಂಕರ್ ಎಸ್ ಹಾಗೂ ಬಿ ಎಂ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್ ಸೇರಿದಂತೆ ಯಶ್ ಶೆಟ್ಟಿ, ಕಾಜಲ್ ಕುಂದಾರ್, ನವೀನ್ ಡಿ ಪಡೀಲ್, ಮಯೂರ್ ಪಟೇಲ್, ಮೇದಿನಿ ಕೆಳಮನೆ, ರವಿಪ್ರಸಾದ್ ಮಂಡ್ಯ, ಕಿಟ್ಟಿ ಶ್ರೀಧರ್, ಶಶಿಧರ್ತ್, ಶಶಿಧರ್ತ್ ರಾಜವಾಡಿ, ಅರುಣಾ ಬಾಲರಾಜ್, ಸಂದ್ಯಾ ಅರೆಕೆರೆ, ಶಿವು ಕಬ್ಬನಹಳ್ಳಿ ಬಣ್ಣ ಹಚ್ಚಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಮನು ಶೇಡ್ಗಾರ್ ಸಂಕಲನ ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದ್ದು ಡಾಕ್ಟರ್ ಕೆ ರವಿವರ್ಮ ಚೇತನ್ ಡಿಸೋಜಾ, ಹಾಗೂ ಡಿಫ್ರೆಂಟ್ ಡ್ಯಾನಿ ನರಸಿಂಹ ಅವರ ಸಾಹಸ ನಿರ್ದೇಶನವಿದೆ.