ವಿನಯ್ ರಾಜಕುಮಾರ್ ಅಭಿನಯದ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಈ ಕುರಿತು ನಟ ವಿನಯ್ ರಾಜಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಈ ಸಿನಿಮಾ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಉದಯ್ ಶಂಕರ್ ತಮ್ಮ ಉದಯ್ ಸಿನಿ ವೆಂಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್ ಸೇರಿದಂತೆ ಯಶ್ ಶೆಟ್ಟಿ, ಬಾಲ ರಾಜವಾಡಿ, ಮೇದಿನಿ ಕೆಳಮನೆ, ಕಾಜಲ್ ಕುಂದರ್, ಸಂದ್ಯಾ ಅರೆಕೆರೆ, ಕಿಟ್ಟಿ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು ಮನೋಜ್ ಶೆಟ್ಟಿಗರ್ ಸಂಕಲನ, ಮನು ಶೇಡ್ಗಾರ್ ಸಂಕಲನ, ಹಾಗೂ ಚೇತನ್ ಡಿಸೋಜಾ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.