ಒಂದೂವರೆ ತಿಂಗಳಲ್ಲಿ ಒಂದೇ ಗ್ರಾಮದ 30 ಮಂದಿ ಸಾವು: ಸರಣಿ ಸಾವಿನಿಂದ ಬೆಚ್ಚಿಬಿದ್ದ ಜನ

ಬೆಳಗಾವಿ: ಒಂದೂವರೆ ತಿಂಗಳಲ್ಲಿ ಒಂದೇ ಗ್ರಾಮದ ಬರೋಬ್ಬರಿ 30 ಜನ ಅಕಾಲಿಕವಾಗಿ ನಿಧನರಾಗಿದ್ದಾರೆ. ಹೀಗೆ ಜನರ ಸಾವಿನಿಂದಾಗಿ ಗ್ರಾಮದ ಜನ ಆತಂಕಕ್ಕೀಡಾಗಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಸರಣಿ ಸಾವು ಸಂಭವಿಸುತ್ತಿದ್ದು, ಗ್ರಾಮದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ದೇವತೆ ಮೂರ್ತಿಗೆ ಪೂಜೆ ಸಲ್ಲಿಸುವಾಗ ಮೂರ್ತಿ ವಿರೂಪಗೊಂಡಿರುವುದು ಸಾವಿಗೆ ಕಾರಣವೆಂದು ಗ್ರಾಮಸ್ಥರು ನಂಬಿದ್ದಾರೆ. ಮೂರ್ತಿ ವಿರೂಪಗೊಂಡ ನಂತರ ಪ್ರತಿ ದಿನವೂ ಗ್ರಾಮದಲ್ಲಿ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಗೊಡಚಿ ವೀರಭದ್ರೇಶ್ವರ ದೇವಸ್ಥಾನದ ಅರ್ಚಕರ ಸಲಹೆಯಂತೆ ಗ್ರಾಮಸ್ಥರು ವಿವಿಧ ಪೂಜಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಗ್ರಾಮದಲ್ಲಿ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಆರೋಗ್ಯ ತಪಾಸಣೆ, ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read