BIG NEWS: ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಮೂವರು ಮಕ್ಕಳ ಶವ ಪತ್ತೆ

ವಿಜಯಪುರ: ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

9 ವರ್ಷದ ಅನುಷಾ ಅನೀಲ ದಹಿಂಡೆ, 7 ವರ್ಷದ ವಿಜಯ ಅನಿಲ ದಹಿಂಡೆ ಹಾಗೂ 7 ವರ್ಷದ ಮಿಹಿರ್ ಶ್ರೀಕಾಂತ್ ಮೃತ ಮಕ್ಕಳು. ಗದಗ ಮೂಲದ ಅನುಷಾ ಹಾಗೂ ವಿಜಯ ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿಜಯಪುರದ ತಮ್ಮ ಮಾವನ ಮನೆಗೆ ಬಂದಿದ್ದರು. ಈ ವೇಳೆ ಮೂವರು ಮಕ್ಕಳು ಸೇರಿಕೊಂಡು ಆಟವಾಡುತ್ತಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆ ಮುಂದೆ ಒಂಟೆಗಳು ಬಂದಿದ್ದವು. ಈ ವೇಳೆ ಮೂವರು ಮಕ್ಕಳು ಒಂಟೆ ಸವಾರಿ ಮಾಡಿದ್ದಾರೆ. ಕೆಲ ಸಮಯದ ಬಳಿಕ ಮೂವರು ಮಕ್ಕಳು ಒಂಟೆಗಳನ್ನು ಹುಡುಕುತ್ತಾ ಮನೆಯಿಂದ ಹೊರಟಿದ್ದಾರೆ.

ಮಕ್ಕಳು ಹೊರಗಡೆ ಆಟವಾಡುತ್ತಿರಬಹುದು ಎಂದು ಮನೆಯವರು ಸುಮ್ಮನಾಗಿದ್ದಾರೆ. ಆದರೆ ಸಂಜೆಯಾದರೂ ಮಕ್ಕಳ ಸುಳಿವಿಲ್ಲದಿದ್ದಾಗ ಆತಂಕ ಶುರುವಾಗಿದೆ. ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ದುಶ್ಯಗಳು ಕಂಡುಬಂದಿವೆ.

ಮಕ್ಕಳಿಗಾಗಿ ಇಂದು ಶೋಧ ನಡೆಸಿದಾಗ ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಯುಜಿಡಿ ಘಟಕಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿದ್ದರೂ ಮಕ್ಕಳು ಇಲ್ಲಿಗೆ ಬರಲು ಹೇಗೆ ಸಾಧ್ಯವಾಗಿದೆ?. ಘಟಕದ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯೇ ಮಕ್ಕಳ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read