BREAKING : ವಿಜಯಪುರದಲ್ಲಿ ನಿಗೂಢ ಶಬ್ದ, ಭೂಮಿ ಕಂಪಿಸಿದ ಅನುಭವ : ಬೆಚ್ಚಿಬಿದ್ದ ಜನರು.!

ವಿಜಯಪುರ: ವಿಜಯಪುರ ಜಿಲ್ಲೆಯ ಹಲವೆಡೆ ನಿಗೂಢ ಶಬ್ದ ಕೇಳಿಬಂದಿದ್ದು, ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಸೇರಿದಂತೆ ಹಲವೆಡೆ ಭಾರಿ ಶಬ್ದ ಕೇಳಿಬಂದಿದೆ. ವಿಜಯಪುಅರ ನಗರದ ಕೆಲ ಭಾಗಗಳಲ್ಲಿಯೂ ಭೂಮಿಯೊಳಗಿನಿಂದ ಭಾರಿ ಸದ್ದು ಕೇಳಿಸಿದೆ.

ಕೆ.ಹೆಚ್.ಬಿ ಕಾಲೋನಿ, ಬ್ಯಾಂಕರ್ಸ್ ಕಾಲೋನಿ, ಸದಾಶಿವನಗರ, ಆಕೃತಿ ಕಾಲೋನಿ ಜನರಿಗೂ ಭಯಂಕರವಾದ ಶಬ್ದ ಕೇಳಿದ್ದು, ಭೂಕಂಪನದ ಅನುಭವ ಕೂಡ ಆಗಿದೆ. ನಿಗೂಢ ಶಬ್ದ, ಭೂಕಂಪನದಿಂದ ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ. ಭೂಮಿಯಾಳದ ನಿಗೂಧ ಸದ್ದಿನ ಬಗ್ಗೆ ಇನ್ನಷ್ಟೇ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read