ಚೆನ್ನೈ: ತಮಿಳಿಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ವಿಜಯ್ ಕರೂರು ಕಾಲ್ತುಳಿತ ದುರಂತದ 2 ತಿಂಗಳ ಬಳಿಕ ಮತ್ತೆ ಚುನಾವಣಾ ರ್ಯಾಲಿ ಆರಂಭಿಸಿದ್ದಾರೆ. ಇಂದು ಕಾಂಚೀಪುರಂನಲ್ಲಿ ಬೃಹ ರ್ಯಾಲಿ ನಡೆಸಲಿದ್ದಾರೆ.
ಕಾಂಚೀವರಂನ ಒಳಾಂಗಣ ಕ್ರೀಡಾಂಗಣದಲ್ಲಿ ನಟ ವಿಜಯ್ ಇಂದು ಬೃಹತ್ ಚುನಾವಣಾ ರ್ಯಾಲಿ ನಡೆಸಲಿದ್ದಾರೆ. ಸುಮಾರು ಎರಡು ತಿಂಗಳ ಬಳಿಕ ವಿಜಯ್ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರ್ಯಾಲಿ ಸುಗಮಾವಾಗಿ ನಡೆಸಲು ಸಕಲ ಸಿದ್ಧತೆ, ವ್ಯವಸ್ಥೆ ಮಾಡಲಾಗಿದೆ.
1500 ಜನರಿಗೆ ಕ್ಯೂರ್ ಆತ್ ಕೋಡ್ ಆಧಾರಿತ ಪಾಸ್ ನೀಡಲಾಗಿದೆ ಪಾಸ್ ಹೊಂದಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಜನಸಂದಣಿ ನಿರ್ವಹಿಸಲು ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಕಾರ್ಯಕರ್ತರಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಹಲವು ಖಾಸಗಿ ಭದ್ರತಾ ಸಂಸ್ಥೆಗಳು ಕೂಡ ಸ್ಥಳದಲ್ಲಿ ಭದ್ರತೆ ಹಾಗೂ ನೂಕುನುಗ್ಗಲುಂಟಾಗದಂತೆ ಮುನ್ನೆಚ್ಚರಿಕೆ ವಹಿಸಿವೆ.
