ರಶ್ಮಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಾ ವಿಜಯ್ ದೇವರಕೊಂಡ ? ವದಂತಿ ಕುರಿತು ಸ್ಪಷ್ಟನೆ ನೀಡಿದ ನಟ

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆಂಬ ವಂದತಿಗೆ ನಟ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ. ಸಿನಿ ಲೈಫ್‌ಸ್ಟೈಲ್ ಏಷ್ಯಾಗೆ ನೀಡಿದ ಸಂದರ್ಶನದಲ್ಲಿ ಅವರು ವದಂತಿಗಳನ್ನು ತಳ್ಳಿಹಾಕಿ ಸದ್ಯ ಈಗ ತಾವು ನಿಶ್ಚಿತಾರ್ಥ ಮಾಡಿಕೊಳ್ಳುವ ಅಥವಾ ಮದುವೆಯಾಗುವ ಹಂತದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣನವರ ಮದುವೆ ಬಗ್ಗೆ ವದಂತಿಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಅವರು ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಈ ವದಂತಿಗೆ ಹೆಚ್ಚಿನ ಪುಷ್ಟಿ ಸಿಗುತ್ತದೆ. ಇತ್ತೀಚಿಗೆ ಈ ಸಿನಿಜೋಡಿ ಮಾಲ್ಡೀವ್ಸ್ ಗೆ ಒಟ್ಟಿಗೆ ಪ್ರಯಾಣ ಮಾಡಿದ್ದಾಗ ಮತ್ತು ಇಬ್ಬರೂ ಪ್ರತ್ಯೇಕವಾಗಿ ವಿಯೆಟ್ನಾಂನಲ್ಲಿರುವ ಚಿತ್ರಗಳನ್ನು ಪೋಸ್ಟ್ ಮಾಡಿದಾಗ ಊಹಾಪೋಷಗಳಿಗೆ ಮತ್ತಷ್ಟು ಸಾಕ್ಷಿ ಸಿಕ್ಕಿತ್ತು. ಆ ಬಳಿಕ ಇವರಿಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆಂಬ ಮಾತು ಕೇಳಿಬಂದಿತು. ಆದರೆ ವಿಜಯ್ ದೇವರಕೊಂಡ ಇದನ್ನು ತಳ್ಳಿಹಾಕಿದ್ದಾರೆ.

ಇಬ್ಬರ ನಿರಂತರ ಡೇಟಿಂಗ್ ವದಂತಿಗಳ ಹೊರತಾಗಿಯೂ ವಿಜಯ್ ಮತ್ತು ರಶ್ಮಿಕಾ ಖಾಸಗಿತನವನ್ನು ಬಹಿರಂಗಪಡಿಸಿಲ್ಲ. ಈ ಜೋಡಿಯು ತಮ್ಮ ಪ್ರಸ್ತುತ ಸಂಬಂಧದಲ್ಲಿ ಸಂತೋಷವಾಗಿರುವ ಕಾರಣ ಈಗಲೇ ನಿಶ್ಚಿತಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕೆಲವೊಂದು ಮೂಲಗಳು ಹೇಳಿವೆ. ಸದ್ಯಕ್ಕೆ ಮದುವೆ ಬಗ್ಗೆ ಚಿಂತಿಸದೇ ಇಬ್ಬರೂ ತಮ್ಮ ತಮ್ಮ ಸಿನಿಮಾಗೆ ಸಂಬಂಧಿಸಿದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read