ಮತ್ತೊಬ್ಬ ನಟಿಯ ನಕಲಿ ವಿಡಿಯೋ ವೈರಲ್ ; ಅಭಿಮಾನಿಗಳಿಗೆ ಎಚ್ಚರಿಸಿದ ವಿದ್ಯಾ ಬಾಲನ್ | Watch Video

ಬಾಲಿವುಡ್ ನಟಿ ವಿದ್ಯಾ ಬಾಲನ್, ತಮ್ಮ ಹೆಸರಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ನಕಲಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋಗಳಲ್ಲಿ ತಮ್ಮನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ನಕಲಿ ವಿಡಿಯೋಗಳಲ್ಲಿ, ವಿದ್ಯಾ ಬಾಲನ್ ಸೋಫಾದ ಮೇಲೆ ಕುಳಿತು, “ಹೇ, ನಾನು ನಿಮ್ಮೆಲ್ಲರ ನೆಚ್ಚಿನ ವಿದ್ಯಾ ಬಾಲನ್…….” ಎಂದು ಹೇಳುತ್ತಿರುವುದು ಕಂಡುಬರುತ್ತದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ನಟಿ, “ಇದು ವಂಚನೆ” ಎಂದು ಎಚ್ಚರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, “ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ನಲ್ಲಿ ನನ್ನ ಹೆಸರಿನಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿವೆ. ಆದರೆ, ಈ ವಿಡಿಯೋಗಳು ಎಐ ತಂತ್ರಜ್ಞಾನದಿಂದ ರಚಿಸಲ್ಪಟ್ಟಿದ್ದು, ನಕಲಿ. ಇದರ ರಚನೆ ಅಥವಾ ಪ್ರಸಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಇದರ ವಿಷಯವನ್ನು ನಾನು ಅನುಮೋದಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋಗಳಲ್ಲಿನ ಯಾವುದೇ ಹೇಳಿಕೆಗಳು ನನ್ನ ಅಭಿಪ್ರಾಯ ಅಥವಾ ಕೆಲಸವನ್ನು ಪ್ರತಿಬಿಂಬಿಸುವುದಿಲ್ಲ. ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸುವಂತೆ ಮತ್ತು ತಪ್ಪುದಾರಿಗೆಳೆಯುವ ಎಐ-ರಚಿತ ವಿಷಯಗಳ ಬಗ್ಗೆ ಜಾಗರೂಕರಾಗಿರಿ ಎಂದು ನಾನು ಎಲ್ಲರಿಗೂ ಒತ್ತಾಯಿಸುತ್ತೇನೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

ಈ ಹಿಂದೆ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕತ್ರಿನಾ ಕೈಫ್, ರಣವೀರ್ ಸಿಂಗ್, ಅಮೀರ್ ಖಾನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಎಐ ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

 

View this post on Instagram

 

A post shared by Vidya Balan (@balanvidya)

 

 

 

View this post on Instagram

 

A post shared by Vidya Balan (@balanvidya)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read