ಸದನದಲ್ಲಿ ವಾಲ್ಮೀಕಿ ನಿಗಮದ ಅಕ್ರಮ ಪ್ರತಿಧ್ವನಿ: ಶಾಸಕ ಅಶ್ವತ್ಥನಾರಾಯಣ-ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಸಮರ: ಕಲಾಪದಲ್ಲಿ ಗದ್ದಲ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ನಿಗಮದ ಹಗರಣ ಪ್ರತಿಧ್ವನಿಸಿದ್ದು, ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು.

ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಅಶ್ವತ್ಥನಾರಾಯಣ, ಸದನದಲ್ಲಿ ಕಾಂಗ್ರೆಸ್ ನವರು ಯಾರೂ ಕಾಣುತ್ತಿಲ್ಲ. ಸಿಎಂ, ಸಚಿವರು ಯಾರೂ ಸದನಕ್ಕೆ ಆಗಮಿಸಿಲ್ಲ. ಖುದ್ದು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳು ಇವೆ. ಇದರ ಬಗ್ಗೆ ಚರ್ಚೆ ವೇಳೆ ಸ್ವತಃ ಸಿಎಂ ಇಲ್ಲ. ಇದೇನಾ ಅವರ ಜವಾಬ್ದಾರಿ? ಎಂದು ಪ್ರಶ್ನಿಸಿದರು. ಅಲ್ಲದೇ ಸದನಕ್ಕೆ ಬಂದು ಉತ್ತರಿಸಲು ಸಿಎಂ ಅವರಿಗೆ ಪುರುಸೊತ್ತಿಲ್ಲವೇ? ಮೊದಲು ಸಿಎಂ ಸಿದ್ದರಾಮಯ್ಯ ಅವರನ್ನು ಸದನಕ್ಕೆ ಕರೆಸಿ ಎಂದು ಪಟ್ಟು ಹಿಡಿದರು.

ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇವೆ. ನೀವು ಲೂಟಿ ಮಾಡಿದ್ದಕ್ಕೆ ಜನ ನಮ್ಮನ್ನು ಆಯ್ಕೆ ಮಾಡಿ ಇಲ್ಲಿ ಕೂರಿಸಿದ್ದಾರೆ. ನೀವು ಮಾಡಬಾರದ ಲೂಟಿ ಮಾಡಿದ್ದಕ್ಕೆ ಜನ ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ. ನೀನು ಲೂಟಿ ಮಾಡುವವರ ಪಿತಾಮಹ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಡಿಸಿಎಂ ಹೇಳಿಕೆಗೆ ಕೆಂಡಾಮಂಡಲರಾದ ಅಶ್ವತ್ಥನಾರಾಯಣ್, ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಹಿಟ್ ಆಂಡ್ ರನ್ ಹೇಳಿಕೆ. ನಾನು ಮಾಡಬಾರದ್ದನ್ನು ಏನು ಮಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಬೇಕು. ಈ ಬಗ್ಗೆ ಡಿಸಿಎಂ ಕ್ಷಮೆ ಕೋರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯರು ಅಶ್ವತ್ಥನಾರಾಯಣ ಹೇಳಿಕೆಗೆ ಧ್ವನಿಗೂಡಿಸಿದರು. ಈ ವೇಳೆ ದನದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲವುಂಟಾದ ಪ್ರಸಂಗ ನಡೆಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read