ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆದ್ದೇ ಗೆಲ್ತಾರೆ; ಕೆ.ಎಸ್.ಈಶ್ವರಪ್ಪ ವಿಶ್ವಾಸ

ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್ ಗೆದ್ದೇ ಗೆಲ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿಯಲ್ಲಿ ಶುದ್ಧೀಕರಣವಾಗಬೇಕು. ಪಕ್ಷದ ವ್ಯವಹಾರದಲ್ಲಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಏಕಸ್ವಾಮ್ಯ ಸಾಧಿಸುತ್ತಿದೆ. ಮೊದಲಿನಂತೆ ಸಾಮೂಹಿಕ ನಾಯಕತ್ವ ಕಾಣೆಯಾಗಿದೆ ಎಂದರು.

ಇಂತಹ ಏಕಸ್ವಾಮ್ಯ ಬದಲಾಗಬೇಕು. ನೈಋತ್ಯ ಪದವೀಧರರ ಕ್ಷೇತ್ರದಿಂದ ರಘುಪತಿ ಭಟ್ ಗೆಲ್ಲುತ್ತಾರೆ. ಹಿಂದೂತ್ವದಲ್ಲಿ ನಂಬಿಕೆಯಿರುವ ಹಾಗೂ ಪ್ರತಿಪಾದಿಸುವ ಜನರ ಮನೆ ಮನೆಗೆ ತೆರಳಿ ರಘುಪತಿ ಭಟ್ ಪರ ಮತ ಯಾಚಿಸುವುದಾಗಿ ಹೇಳಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read