Watch Video | ಸ್ಪಾರ್ಕ್ ಗನ್ ಹಿಡಿದು ನವಜೋಡಿ ಪೋಸ್; ಸಂಭ್ರಮದ ವೇಳೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ನವಜೋಡಿ ವಿಭಿನ್ನವಾಗಿ ಮತ್ತು ಸೃಜನಶೀಲತೆಯಿಂದ ಅದನ್ನು ಸ್ಮರಣೀಯ ದಿನವನ್ನಾಗಿಸಲು ಪ್ರಯತ್ನಿಸುತ್ತಿದೆ. ಅದಾಗ್ಯೂ ಇಂತಹ ವಿಭಿನ್ನ ಸಾಹಸಗಳು ಯಾವಾಗಲೂ ಎಲ್ಲರಿಗೂ ಸುರಕ್ಷಿತವಾಗಿರುವುದಿಲ್ಲ ಎಂದು ಇತ್ತೀಚಿನ ವೀಡಿಯೊ ಸಾಬೀತುಪಡಿಸಿದೆ.

ಮಹಾರಾಷ್ಟ್ರದ ವೀಡಿಯೊವೊಂದರಲ್ಲಿ ವಧು-ವರರು ತಮ್ಮ ಮದುವೆಯ ದಿನದಂದು ಸ್ಪಾರ್ಕ್ಲ್ ಗನ್‌ನೊಂದಿಗೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ. 13 ಸೆಕೆಂಡುಗಳ ಕ್ಲಿಪ್‌ನಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ದಂಪತಿಗಳು ಸಂತೋಷದಿಂದ ಒಟ್ಟಿಗೆ ಪೋಸ್ ನೀಡುವುದನ್ನು ಕಾಣಬಹುದು.

ಅವರು ಗುಂಡು ಹಾರಿಸಿದ ತಕ್ಷಣ ಒಂದು ಬಂದೂಕು ಸ್ಫೋಟಗೊಂಡು ಬೆಂಕಿ ವಧುವಿನ ಮುಖಕ್ಕೆ ಬಡಿದಿದೆ. ಎಲ್ಲರೂ ಮದುವೆ ಹೆಣ್ಣನ್ನು ರಕ್ಷಿಸಲು ಧಾವಿಸುತ್ತಿದ್ದಂತೆ ವಧು ಬೇಗನೆ ಬಂದೂಕನ್ನು ಎಸೆಯುತ್ತಾರೆ.

ಈ ವಿಡಿಯೋವನ್ನು ವಿದಿತ್ ಶರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನ ಶೀರ್ಷಿಕೆಗೆ “ಜನರು ತಮ್ಮ ಉತ್ತಮ ದಿನಗಳನ್ನು ಏಕೆ ನಾಶಪಡಿಸುತ್ತಾರೆ” ಎಂದು ಹೆಸರಿಸಿದ್ದಾರೆ.

ಇಂತಹ ಸಾಹಸಗಳಿಗೆ ಕೈ ಹಾಕದಂತೆ ನೆಟ್ಟಿಗರು ಕಮೆಂಟ್ ಮಾಡಿದ್ದು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

https://twitter.com/TheViditsharma/status/1641677132391923715?ref_src=twsrc%5Etfw%7Ctwcamp%5Etweetembed%7Ctwterm%5E1641677132391923715%7Ctwgr%5E7277f4c51c389ffed6f186df8a26290ac8d5834b%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-wedding-stunt-goes-horribly-wrong-sparkling-gun-blows-up-on-brides-face-3911670

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read