ಚೆನ್ನೈನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ನೃತ್ಯಗಾರ್ತಿ ಅಸಭ್ಯವಾಗಿ ನೃತ್ಯ ಮಾಡಿದ್ದು ಇದರಲ್ಲಿ ವೈದ್ಯರು ಕೂಡ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಅಸೋಸಿಯೇಶನ್ ಆಫ್ ಕೊಲೊನ್ ಮತ್ತು ರೆಕ್ಟಲ್ ಸರ್ಜನ್ಸ್ ಆಫ್ ಇಂಡಿಯಾ (ACRSI) ಆಯೋಜಿಸಿದ ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಪ್ರದರ್ಶಿಸಲಾಗಿದೆ. ಸಮ್ಮೇಳನವು ಸೆಪ್ಟೆಂಬರ್ 19 ರಿಂದ 21ರವರೆಗೆ ನಡೆಯಿತು ಎಂದು ತಿಳಿದುಬಂದಿದೆ.
ಕಾರ್ಯಕ್ರಮದ ದೃಶ್ಯಗಳು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿವೆ. ವೈದ್ಯಕೀಯ ಸಮ್ಮೇಳನದ ಭಾಗವಾಗಿ ನಡೆದ ನೃತ್ಯದ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ. ಸಮ್ಮೇಳನದ ವೇದಿಕೆಯಲ್ಲಿ ಮಹಿಳೆ ನೃತ್ಯ ಮಾಡುವಾಗ ಕೆಲವರು ಶಿಳ್ಳೆ ಹೊಡೆದರೆ, ಇತರರು ಅವಳನ್ನು ಸ್ಪರ್ಶಿಸಲು ಮತ್ತು ನೃತ್ಯ ಮಾಡಲು ಮುಂದಾದರು. ನೃತ್ಯ ಪ್ರದರ್ಶನವನ್ನು ಆನಂದಿಸುತ್ತಿರುವಾಗ ಕೆಲವು ಪುರುಷರು ಮದ್ಯದ ಲೋಟವನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ.
ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಈ ಕೃತ್ಯವನ್ನು “ತುಂಬಾ ನಾಚಿಕೆಗೇಡಿನ” ಮತ್ತು “ಗಂಭೀರ” ಎಂದು ಕರೆದಿದ್ದಾರೆ.
https://twitter.com/ginger_bread_s/status/1838198013912604718?ref_src=twsrc%5Etfw%7Ctwcamp%5Etweetembed%7Ctwterm%5E1838198013912604718%7Ctwgr%5E562f6b60a5c9eec668f102c8d1ff02cd82cb665c%7Ctwcon%5Es1_&ref_url=https%3A%2F%2F