ಮುಂಬೈನ ಫುಡ್ ಸ್ಟ್ರೀಟ್‌ನಲ್ಲಿ ಅಮೆರಿಕನ್ ಪ್ರವಾಸಿಗ ಕ್ರಿಸ್ ರೋಡ್ರಿಗಸ್ ಮತ್ತು ಬೂಟ್ ಪಾಲಿಶ್ ಮಾಡುವ ಬಾಬು ಭೇಟಿಯಾಗಿದ್ದಾರೆ. ಬಾಬು ಕ್ರಿಸ್‌ನ ಬಿಳಿ ಬೂಟುಗಳನ್ನು ಪಾಲಿಶ್ ಮಾಡಲು ಕೇಳಿದ್ದಾನೆ. ಕ್ರಿಸ್, ಬಾಬುವಿನ ಜೊತೆ ಮಾತಾಡ್ತಾ ಅವನ ಕಷ್ಟಗಳನ್ನು ಕೇಳಿದ್ದಾನೆ. ಬಾಬು ಜೈಪುರದಿಂದ ಕೆಲಸ ಹುಡುಕಿಕೊಂಡು ಬಂದು ಫುಟ್ ಪಾತ್‌ನಲ್ಲಿ ವಾಸಿಸುತ್ತಿರುವುದಾಗಿ ಮತ್ತು ದಿನಕ್ಕೆ 30-40 ರೂಪಾಯಿ ಗಳಿಸುತ್ತಿರುವುದಾಗಿ ಹೇಳಿದ್ದಾನೆ.
ಬಾಬು ಬೂಟು ಪಾಲಿಶ್ ಮಾಡಿದ ನಂತರ 10 ರೂಪಾಯಿ ಮಾತ್ರ ಕೇಳಿದ್ದಾನೆ. ಆದರೆ ತನ್ನ ವ್ಯಾಪಾರಕ್ಕೆ ಬೂಟು ಡಬ್ಬಿ ಬೇಕಾಗಿದೆ ಎಂದು ಕ್ರಿಸ್‌ಗೆ ಸಹಾಯ ಕೇಳಿದ್ದಾನೆ. ಬಾಬುವಿನ ಕಷ್ಟಕ್ಕೆ ಮರುಗಿ ಕ್ರಿಸ್ 2000 ರೂಪಾಯಿ ಕೊಟ್ಟು ಆ ದುಡ್ಡಿನಲ್ಲಿ ಬೂಟು ಡಬ್ಬಿ ಕೊಂಡುಕೊಳ್ಳಲು ಹೇಳಿದ್ದಾನೆ. ಮರುದಿನ ಬಂದು ನೋಡುತ್ತೇನೆ ಎಂದು ಹೇಳಿದ್ದಾನೆ.
ಆದರೆ ಮರುದಿನ ಕ್ರಿಸ್ ಬಂದಾಗ ಬಾಬು ಡಬ್ಬಿ ಕೊಂಡುಕೊಂಡಿರಲಿಲ್ಲ. ನೆಪ ಹೇಳಿದ್ದಾನೆ. ಅಲ್ಲಿನ ತೆಂಗಿನಕಾಯಿ ಮಾರುವವನು ಬಾಬು ಎಲ್ಲರಿಗೂ ಹೀಗೆ ಮಾಡುತ್ತಾನೆ ಎಂದು ಹೇಳಿದ್ದಾನೆ. ಕ್ರಿಸ್ ತನ್ನ ನೆರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ನಿರಾಸೆಗೊಂಡಿದ್ದಾನೆ.