ಪ್ರತಿಭಟನೆಗೆ ಬೆದರಿ ಬೆಂಗಾವಲು ಪಡೆ ಬಿಟ್ಟು ಬೈಕ್ ನಲ್ಲಿ ಪರಾರಿಯಾದ ಕೇಂದ್ರ ಸಚಿವ | VIDEO

ಪಾಟ್ನಾ: ಬಿಹಾರದ ಬೇಗುಸರಾಯ್‌ ನಲ್ಲಿ ಭೇಟಿಯ ವೇಳೆ ಪ್ರತಿಭಟನೆ ಎದುರಾಗಿದ್ದರಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಮ್ಮ ಬೆಂಗಾವಲು ಪಡೆಯನ್ನು ಬಿಟ್ಟು ಬೈಕ್‌ ನಲ್ಲಿ ಪರಾರಿಯಾಗಿದ್ದಾರೆ.

ಕೇಂದ್ರ ಸಚಿವ ಮತ್ತು ಬಿಹಾರದ ಬೇಗುಸರಾಯ್‌ನ ಬಿಜೆಪಿ ಸಂಸದರಾದ ಗಿರಿರಾಜ್ ಸಿಂಗ್ ಅವರು ತಮ್ಮ ಸ್ವಂತ ಕ್ಷೇತ್ರದಲ್ಲಿ ಭಾನುವಾರ ಪ್ರತಿಭಟನಾಕಾರರು ಘೇರಾವ್ ಹಾಕಿದ್ದಾರೆ. ಇದರಿಂದಾಗಿ ಅವರು ಬೈಕ್‌ ನಲ್ಲಿ ಪಿಲಿಯನ್ ಸವಾರಿ ಮಾಡಿಕೊಂಡು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ವೈರಲ್ ಆಗಿದೆ.

ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲು ಬಯಸಿದ ಎಎನ್‌ಎಂ(ವೈದ್ಯಕೀಯ) ಕಾರ್ಯಕರ್ತರು ಗಿರಿರಾಜ್ ಸಿಂಗ್ ಅವರ ವಾಹನಕ್ಕೆ ಘೇರಾವ್ ಹಾಕಿದ್ದಾರೆ. ಆದರೆ ಮನವಿ ಸ್ವೀಕರಿಸದೇ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಎಎನ್‌ಎಂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಕುಂದುಕೊರತೆಗಳನ್ನು ಸಚಿವರು ಗಮನಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಸಮಸ್ಯೆಗಳನ್ನು ಪರಿಹರಿಸುವ ಬದಲು ಸ್ಥಳದಿಂದ ಪಲಾಯನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/firstbiharnews/status/1820007005534191898

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read