ಆಟವಾಡ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ; ಸಿಸಿ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಬೀದಿನಾಯಿಯೊಂದು ಆಟವಾಡುತ್ತಿದ್ದ 18 ತಿಂಗಳ ಮಗು ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಘಟನೆಯ ಭಯಾನಕತೆಯನ್ನ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ.

18 ತಿಂಗಳ ಮಗು ಮತ್ತೊಂದು ಹುಡುಗನೊಂದಿಗೆ ನಿಂತಿದ್ದಾಗ ಬೀದಿ ನಾಯಿ ಸಮೀಪಿಸಿ ಆತನ ಮೇಲೆ ಹಾರಿ ನೆಲಕ್ಕೆ ಕೆಡವಿದೆ. ಮಗುವಿನ ತಾಯಿ ಬೇಗನೆ ಬಂದು ಮಗನನ್ನು ರಕ್ಷಿಸಿ ನಾಯಿಯನ್ನು ಹೆದರಿಸಿ ಓಡಿಸಿದಳು. ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಮಕ್ಕಳು, ಮಹಿಳೆಯರು, ಪುರುಷರು ಬೀದಿ ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಬುಧವಾರ ಆಗಸ್ಟ್ 7 ರಂದು ವಾರಂಗಲ್ ಜಿಲ್ಲೆಯ ಅರೆಪಲ್ಲಿ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ ನಂತರ 70 ವರ್ಷದ ವೃದ್ಧ ಗಾಯಗೊಂಡಿದ್ದಾರೆ.

ನಾಯಿಗಳು ಅವರ ಮೇಲೆ ದಾಳಿ ಮಾಡಿದಾಗ ಅವರು ತಮ್ಮ ನಿವಾಸದ ಮುಂದೆ ಕುಳಿತಿದ್ದರು ಎಂದು ವರದಿಯಾಗಿದೆ. ಅಸ್ಮಿತ್ ಮತ್ತು ಹಾರ್ತಿಕ್ ಎಂಬ ಇಬ್ಬರು ಮಕ್ಕಳು ಆಗಸ್ಟ್ 2 ರಂದು ತಮ್ಮ ಮನೆಯ ಮುಂದೆ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿದ್ದವು. ಇಬ್ಬರನ್ನೂ ಗದ್ವಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೈದರಾಬಾದ್ ನಲ್ಲಿ ಪ್ರತಿ ವರ್ಷ 30,000 ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read