ಹಿಮಾಲಯದಲ್ಲೊಂದು ಅಪರೂಪದ ವಿದ್ಯಾಮಾನ; ಮನಮೋಹಕ ದೃಶ್ಯಕ್ಕೆ ಬೆರಗಾದ ಜನ

ನೇಪಾಳ: ನೇಪಾಳದ ಭವ್ಯವಾದ ಮೌಂಟ್ ಎವರೆಸ್ಟ್‌ನ ಪೂರ್ವ ಗೋಡೆಯ ಮೇಲೆ ಇತ್ತೀಚೆಗೆ ಸಂಭವಿಸಿದ ‘ಮೇಘ ಹಿಮಪಾತ’ದ ಉಸಿರುಕಟ್ಟುವ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಪ್ರವಾಸಿಗರು ಅಪರೂಪದ ಘಟನೆಯನ್ನು ವೀಕ್ಷಿಸಿದ್ದಾರೆ. ವೀಡಿಯೊವನ್ನು ಲಿಂಕ್ಡ್‌ಇನ್‌ನಲ್ಲಿ ಡಾ ಸುಬ್ರಮಣಿಯನ್ ನಾರಾಯಣನ್ ಅವರು ಪೋಸ್ಟ್ ಮಾಡಿದ್ದಾರೆ.

ಪರ್ವತದ ಶಿಖರದಿಂದ ಕೆಳಕ್ಕೆ ಬೀಳುವ ಮೋಡಗಳನ್ನು ವಿಡಿಯೋದಲ್ಲಿ ನೋಡಬಹುದು. ಇವು ನೇರವಾಗಿ ನದಿಗೆ ಬೀಳುವುದನ್ನು ವೀಡಿಯೊ ತೋರಿಸುತ್ತದೆ. ಸ್ವಲ್ಪ ಸಮಯದ ನಂತರ, ಸುಂದರವಾದ ಕಾಮನಬಿಲ್ಲು ಹೊರಹೊಮ್ಮುವುದನ್ನು ನೋಡಿದರೆ ಸಿನಿಮೀಯ ಪ್ರದರ್ಶನದಂತೆ ಕಾಣುತ್ತದೆ. ಪ್ರವಾಸಿಗರು ಹರ್ಷೋದ್ಗಾರ ಮತ್ತು ಸೌಂದರ್ಯವನ್ನು ಶ್ಲಾಘಿಸಿದರು.

“ನೇಪಾಳದಲ್ಲಿ ಕಾಣದ ವಿದ್ಯಮಾನ (ಮೋಡದ ಹಿಮಪಾತ) ಇದು ಎಂದು ನಾರಾಯಣನ್‌ ಬರೆದುಕೊಂಡಿದ್ದಾರೆ.

ಪರ್ವತಾರೋಹಿಗಳ ಗುಂಪಿನಿಂದ ಸಂಪೂರ್ಣವಾದ ದೃಶ್ಯವನ್ನು ಆಕಸ್ಮಿಕವಾಗಿ ರೆಕಾರ್ಡ್ ಮಾಡಲಾಗಿದೆ. ನದಿಯ ಮೇಲೆ ಕಾಮನಬಿಲ್ಲು ಕಾಣಿಸಿಕೊಳ್ಳುತ್ತದೆ, ಇದು ಸೌಂದರ್ಯವನ್ನು ಹೆಚ್ಚಿಸುತ್ತದೆ, ಇದು ವಿಸ್ಮಯ ಎಂದಿದ್ದಾರೆ. ನೆಟ್ಟಿಗರು ಕೂಡ ಇಂಥ ಸೌಂದರ್ಯ ನೋಡಿಯೇ ಇರಲಿಲ್ಲ ಎಂದು ಶ್ಲಾಘಿಸುತ್ತಿದ್ದಾರೆ.

https://www.youtube.com/watch?v=dBnp9XMcEfE

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read