ಕುಡಿದ ಅಮಲಿನಲ್ಲಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಮೇಲೆ ಪುಷ್ ಅಪ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾರಿನ ಮಾಲೀಕನಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.
ಇಂತಹದೊಂದು ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಕಾರಿನಲ್ಲಿ ಮದ್ಯಪಾನ ಮಾಡಿಕೊಂಡು ಹೋಗುತ್ತಿದ್ದ ಯುವಕರು ಕಿಟಕಿಯಿಂದ ದೇಹವನ್ನು ಹೊರ ಹಾಕಿದ್ದರು. ಒಬ್ಬನಂತೂ ಇನ್ನಷ್ಟು ಹುಚ್ಛಾಟ ಮೆರೆದಿದ್ದು, ಕಾರಿನ ಮೇಲೆ ಪುಷ್ ಅಪ್ ಮಾಡಿದ್ದ. ಪಕ್ಕದಲ್ಲಿಯೇ ಹೋಗುತ್ತಿದ್ದ ಮತ್ತೊಂದು ಕಾರಿನವರು ಇದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋದ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಕಾರಿನ ಮಾಲೀಕನಿಗೆ 6,000 ರೂಪಾಯಿಗಳ ದಂಡದ ಚಲನ್ ನೀಡಲಾಗಿದ್ದು, ಇನ್ನು ಪುಷ್ ಅಪ್ ಮಾಡಿದ್ದ ಯುವಕ ಲೋಕೇಶ್ ನನ್ನು ಬಂಧಿಸಲಾಗಿದೆ. ಅಲ್ಲದೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
They have no fear of anyone's life and neither of Gurgaon trafficpolice @TrafficGGM
Vichle no HR72F6692@DC_Gurugram @TrafficGGM@cmohry @gurgaonpolice pic.twitter.com/pM2NeypUdR— Pradeepdubey (@dubey_100) May 30, 2023