SHOCKING : ಬಟ್ಟೆ ಅಂಗಡಿಯ ಟ್ರೈಯಲ್ ರೂಂನಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಣ : ಮಾಲೀಕ ಅರೆಸ್ಟ್.!

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಟ್ಟೆ ಅಂಗಡಿಯ ಟ್ರೈಯಲ್ ರೂಂನಲ್ಲಿ ಗುಪ್ತ ಕ್ಯಾಮರಾ ಅಳವಡಿಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಅಂಗಡಿ ಮಾಲೀಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ಅಪ್ರಾಪ್ತ ವಯಸ್ಸಿನ ಮಗ ಕೂಡ ಭಾಗಿಯಾಗಿದ್ದು, ಆತ ಕೆಲವು ವಿಡಿಯೋಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಶುಕ್ರವಾರ ಕೆಲವು ಸ್ಥಳೀಯ ಮಹಿಳೆಯರ ವಿಡಿಯೋಗಳು ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ದೇವರೋಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಧ್ವಾ ಪಟ್ಟಣದಲ್ಲಿರುವ ನಾರಾಯಣ್ ಗುಪ್ತಾ ಎಂಬುವವರ ಬಟ್ಟೆ ಅಂಗಡಿಯ ಟ್ರೈಯಲ್ ರೂಂನಲ್ಲಿ ಗುಪ್ತ ಕ್ಯಾಮರಾ ಇದೆ ಎಂದು ಕೃಷ್ಣಪಾಲ್ ಸಿಂಗ್ ಬೈಸ್ ಶನಿವಾರ ಬೆಳಗ್ಗೆ ದೂರು ದಾಖಲಿಸಿದ್ದಾರೆ.

ದೂರು ದಾಖಲಾದ ತಕ್ಷಣ ಪೊಲೀಸರು ಅಂಗಡಿ ಮೇಲೆ ದಾಳಿ ನಡೆಸಿ ಕ್ಯಾಮರಾವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಠಾಣಾ ಉಸ್ತುವಾರಿ ಸುಭಾಷ್ ದುಬೆ ತಿಳಿಸಿದ್ದಾರೆ. ಆರೋಪಿ ಗುಪ್ತಾ ತಾನೇ ಕ್ಯಾಮರಾವನ್ನು ಅಳವಡಿಸಿ, ಈ ವಿಡಿಯೋಗಳನ್ನು ತನ್ನ ಕಂಪ್ಯೂಟರ್‌ನಲ್ಲಿ ನೋಡುತ್ತಿದ್ದ ಎಂದು ಇನ್ಸ್‌ಪೆಕ್ಟರ್ ದುಬೆ ಪಿಟಿಐಗೆ ತಿಳಿಸಿದ್ದಾರೆ.

ತನಿಖೆಯಲ್ಲಿ, ಗುಪ್ತಾ ಅವರ 14 ವರ್ಷದ ಮಗ ಈ ವಿಡಿಯೋಗಳನ್ನು ಕಂಡುಹಿಡಿದು, ಅವುಗಳಲ್ಲಿ ಕೆಲವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿರುವುದು ಪತ್ತೆಯಾಗಿದೆ.

ಗುಪ್ತಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 54ಸಿ (ವೊಯೆರಿಸಂ), 509 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಮಾಡಿದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಗುಪ್ತಾನನ್ನು ಶನಿವಾರ ಸಂಜೆ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್‌ಜಿ ಶ್ರೀವಾಸ್ತವ ತಿಳಿಸಿದ್ದಾರೆ. ಈ ಘಟನೆಯು ಮಹಿಳೆಯರ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read