ವಿಮಾನದ ಅಲುಗಾಟಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು; ಕಿರುಚಾಡಿದ ‌ʼವಿಡಿಯೋ ವೈರಲ್ʼ

ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಫ್ಲೈಟ್ 957 ರ ನಾಟಕೀಯ ವೀಡಿಯೊ ತುಣುಕೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಪ್ರಯಾಣಿಕರು ಕಿರುಚುತ್ತಿರುವುದು, ಲಗೇಜ್‌ ಬ್ಯಾಗ್ ಮತ್ತು ಕಾಗದದ ಕಪ್‌ ಗಳು ಹಾರಾಡುತ್ತಿರುವುದು ಸೆರೆಯಾಗಿದೆ.

ಸ್ವೀಡನ್‌ನ ಸ್ಟಾಕ್‌ಹೋಮ್‌ನಿಂದ ಯುನೈಟೆಡ್ ಸ್ಟೇಟ್ಸ್‌ನ ಮಿಯಾಮಿಗೆ ಹೊರಟಿದ್ದ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ವಿಮಾನವು ಗ್ರೀನ್‌ಲ್ಯಾಂಡ್‌ನಲ್ಲಿ ತೀವ್ರ turbulence‌ ಪರಿಸ್ಥಿತಿ ಎದುರಿಸಿದ ನಂತರ ವಾಪಾಸ್ ಹಿಂತಿರುಗಬೇಕಾಯಿತು.

ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಫ್ಲೈಟ್ 957 ರ ಈ ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಪ್ರಯಾಣಿಕರು ಭಯಭೀತರಾಗಿ ಕಿರುಚಿದಾಗ ಮತ್ತು ಕ್ಯಾಬಿನ್ ಸಿಬ್ಬಂದಿ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ಅವ್ಯವಸ್ಥೆ ಸೆರೆಯಾಗಿದೆ. ಒಬ್ಬ ಪ್ರಯಾಣಿಕ ತಮ್ಮ ತಲೆಯನ್ನು ಸೀಲಿಂಗ್‌ಗೆ ಹೊಡೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

turbulence ಎಷ್ಟು ತೀವ್ರವಾಗಿತ್ತೆಂದರೆ ಪ್ಲಾಸ್ಟಿಕ್ ಕಪ್‌ ಮತ್ತು ಬ್ಯಾಗ್ ಸೇರಿದಂತೆ ಹಗುರಾದ ವಸ್ತುಗಳು ಕ್ಯಾಬಿನ್‌ಗೆ ಅಡ್ಡಲಾಗಿ ಹಾರಾಡಿವೆ, ವಿಮಾನದಲ್ಲಿದ್ದವರು ತೆಗೆದ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಗಂಭೀರವಾದ ಗಾಯಗಳ ಬಗ್ಗೆ ಯಾವುದೇ ವರದಿಗಳಿಲ್ಲದಿದ್ದರೂ, ಪೈಲಟ್‌ ವಿಮಾನವನ್ನು ತಿರುಗಿಸಲು ಮತ್ತು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ಗೆ ಹಾರಿಸಲು ನಿರ್ಧರಿಸಿದ್ದು, ಅಲ್ಲಿ ಸಂಭವನೀಯ ಹಾನಿಗಾಗಿ ತಪಾಸಣೆಗೆ ಒಳಗಾಯಿತು.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read