ಎಚ್ಚರಿಕೆಯ ನಡುವೆಯೂ ದೆಹಲಿ ಮೆಟ್ರೋ ರೈಲಿನಲ್ಲಿ ಡಾನ್ಸ್ ಮಾಡಿದ ಮಹಿಳೆ; ವಿಡಿಯೋಗೆ ಪರ-ವಿರೋಧ

ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಪದೇ ಪದೇ ರೈಲು ಕೋಚ್ ಗಳ ಒಳಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವುದನ್ನು ನಿಷೇಧಿಸುವ ಎಚ್ಚರಿಕೆಗಳನ್ನು ನೀಡಿದ್ದರೂ ಸಹ ಹಲವಾರು ಪ್ರಯಾಣಿಕರು ಇನ್ನೂ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದೀಗ ಮತ್ತೊಂದು ವಿಡಿಯೋದಲ್ಲಿ ದೆಹಲಿಯ ಮೆಟ್ರೋ ಕೋಚ್‌ನಲ್ಲಿ ಮಹಿಳೆಯೊಬ್ಬರು ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದಾರೆ. ಆ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಸಂಚಲನ ಮೂಡಿಸಿದೆ.

ಕಪ್ಪು ಬಣ್ಣದ ಪಾರದರ್ಶಕ ಟಾಪ್ ಮತ್ತು ಜೀನ್ಸ್ ಧರಿಸಿರುವ ಮಹಿಳೆ ನೇಹಾ ಭಾಸಿನ್ ಮತ್ತು ಬಪ್ಪಿ ಲಹಿರಿ ಅವರ ‘ಅಸಲಾಮ್-ಎ-ಇಷ್ಕುಮ್’ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿನ ಮಹಿಳೆಯನ್ನು ಪ್ರಿಯಾ ಶರ್ಮಾ ಎಂದು ಗುರುತಿಸಲಾಗಿದೆ ಮತ್ತು ವೀಡಿಯೊವನ್ನು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ಇದೀಗ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಕೆಯ ನೃತ್ಯವನ್ನು ಇಷ್ಟಪಟ್ಟಿದ್ದು ಆತ್ಮವಿಶ್ವಾಸವನ್ನು ಶ್ಲಾಘಿಸಿದರೆ, ಇತರರು DMCR ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯನ್ನು ಟ್ಯಾಗ್ ಮಾಡಿ ಇಂತಹ ನಡವಳಿಕೆಗಳನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

https://youtu.be/0W12ofz0FRs

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read