Viral Video | ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಗೆಪಾಟಲಿಗೀಡಾದ ಸೋಮಾಲಿಯಾ ಕ್ರೀಡಾಪಟು

ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ 31ನೇ ಸಮ್ಮರ್ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಓಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಬೇತಿ ಪಡೆಯದ ಸೊಮಾಲಿಯಾದ ನಸ್ರಾ ಅಬುಕರ್ ಅಲಿ ಅವರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸೊಮಾಲಿಯಾದ ನಸ್ರಾ ಅಬುಕರ್ ಅಲಿ ಓಟವನ್ನು ಪೂರ್ಣಗೊಳಿಸಲು 21 ಸೆಕೆಂಡುಗಳನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಲಿ ಅವರ ಈ ಪ್ರದರ್ಶನವು ಟೀಕೆಗಳ ಅಲೆಯನ್ನೇ ಹುಟ್ಟುಹಾಕಿದೆ. ತರಬೇತಿ ಪಡೆಯದ ಕ್ರೀಡಾಪಟುವನ್ನು ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಕಳುಹಿಸಿದ್ದಕ್ಕಾಗಿ ಬಳಕೆದಾರರು ಸೊಮಾಲಿಯಾದ ಯುವ ಮತ್ತು ಕ್ರೀಡಾ ಸಚಿವಾಲಯವನ್ನು ದೂಷಿಸಿದ್ದಾರೆ.

ಎಲ್ಹಾಮ್ ಗರಾದ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಇತರ ಮಹಿಳಾ ಕ್ರೀಡಾಪಟುಗಳು ಓಟಕ್ಕೆ ತಯಾರಿ ನಡೆಸುತ್ತಿರುವುದನ್ನು ನೋಡಬಹುದು. ಆದರೆ, ಅಲಿ ಹೇಗೆ ನಿಲ್ಲಬೇಕು ಹಾಗೂ ಯಾವ ರೀತಿ ಓಡಬೇಕು ಅನ್ನೋ ನಿಲುವನ್ನು ತೆಗೆದುಕೊಳ್ಳಲು ಸಹ ಹೆಣಗಾಡುತ್ತಿದ್ದಾರೆ. ಸ್ಪರ್ಧಿಗಳು ಓಡಲು ಬಜರ್ ರಿಂಗಾದ ತಕ್ಷಣ, ಅಥ್ಲೀಟ್‌ಗಳು ವೇಗವಾಗಿ ಮುಂದೆ ಓಡುತ್ತಾರೆ. ಆದರೆ, ಅಲಿ ಓಟದಲ್ಲಿ ತುಂಬಾ ಹಿಂದೆ ಬಿದ್ದಿದ್ದಾರೆ. ಇತರ ಅಥ್ಲೀಟ್‌ಗಳು ಓಟವನ್ನು ತ್ವರಿತವಾಗಿ ಮುಗಿಸಿದರೆ, ಅಲಿ ನಡುವೆ ಟ್ರ್ಯಾಕ್‌ನಲ್ಲಿ ಜಿಗಿಯುವುದು ಕಂಡುಬಂತು.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಯುವ ಮತ್ತು ಕ್ರೀಡಾ ಸಚಿವಾಲಯವನ್ನು ಕೆಳಗಿಳಿಸಬೇಕು. ಇಂತಹ ಅಸಮರ್ಥ ಸರಕಾರಕ್ಕೆ ಸಾಕ್ಷಿಯಾಗುತ್ತಿರುವುದು ಬೇಸರ ತಂದಿದೆ. ಓಟದಲ್ಲಿ ಸೊಮಾಲಿಯಾವನ್ನು ಪ್ರತಿನಿಧಿಸಲು ಅವರು ತರಬೇತಿ ಪಡೆಯದವರನ್ನು ಹೇಗೆ ಆಯ್ಕೆ ಮಾಡಬಹುದು? ಇದು ನಿಜಕ್ಕೂ ಆಘಾತಕಾರಿ ಮತ್ತು ಅಂತಾರಾಷ್ಟ್ರೀಯವಾಗಿ ನಮ್ಮ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಇಂಟರ್ನೆಟ್ ಬಳಕೆದಾರರು ಸಹ ಯುವ ಮತ್ತು ಕ್ರೀಡಾ ಸಚಿವಾಲಯವನ್ನು ದೂರಿದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read