ಮನುಷ್ಯರು ಮಾತ್ರ ಭಕ್ತಿ-ಶ್ರದ್ಧೆ ಹೊಂದಿರಲು ಸಾಧ್ಯ ಎಂಬ ತಮ್ಮ ನಂಬಿಕೆಯನ್ನು ಈಗ ಬದಲಿಸಿಕೊಳ್ಳಬೇಕಾದ ಸಮಯ ಬಂದಿದೆ ಎನಿಸುತ್ತದೆ! ಇಷ್ಟು ದಿನ ದೈವಿಕ ಭಕ್ತಿಯನ್ನು ಪ್ರದರ್ಶಿಸುವುದು ಮನುಷ್ಯರಿಗೆ ಮಾತ್ರ ಸೀಮಿತ ಎಂದುಕೊಂಡಿದ್ದವರಿಗೆ ಈ ವಿಡಿಯೋ ಅಚ್ಚರಿ ಮೂಡಿಸಿದೆ. ಪ್ರಾಣಿಗಳೂ ಸಹ ದೇವರಿಗೆ ಪ್ರಾರ್ಥನೆ ಸಲ್ಲಿಸಬಹುದು ಎಂಬುದನ್ನು ತೋರಿಸುವ ಮುದ್ದಾದ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಶಿವನ ಪ್ರತಿಮೆಯ ಮುಂದೆ ಹುಲಿಯೊಂದು ಶಾಂತವಾಗಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಗ್ರಹದ ಮುಂದಿರುವ ಸಣ್ಣ ಕೊಳದಲ್ಲಿ ಹುಲಿ ಅರ್ಧ ಮುಳುಗಿದೆ. ಆದರೆ, ಈ ರೋಮದಿಂದ ಕೂಡಿದ ‘ಭಕ್ತ’ನಿಗೆ ನೀರಿನ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದು ನೆಟಿಜನ್‌ಗಳು ನಂಬಿದ್ದಾರೆ. ದೊಡ್ಡ ಗಾಜಿನ ಆವರಣದ ಮೂಲಕ ವಿಡಿಯೋವನ್ನು ಚಿತ್ರೀಕರಿಸಲಾಗಿದೆ, ಇದು ಹುಲಿ ಸೆರೆಯಲ್ಲಿರಬಹುದು ಎಂದು ಸೂಚಿಸುತ್ತದೆ.
ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಹೆಚ್ಚಿನ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ‘ದೇವಿ ಮಾ’ ಬಗ್ಗೆ ಶಿವನಿಗೆ ಹುಲಿ ‘ದೂರು’ ನೀಡುತ್ತಿದೆ ಎಂದು ಅನೇಕರು ತಮಾಷೆ ಮಾಡಿದ್ದಾರೆ, ಆದರೆ ಕೆಲವರು ಈ ಘಟನೆಯನ್ನು ಮುದ್ದಾಗಿದೆ ಎಂದು ಬಣ್ಣಿಸಿದ್ದಾರೆ. ಈ ಪೋಸ್ಟ್‌ನ ನಿಖರ ವಿವರಗಳು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸಲು ಸಾಧ್ಯವಾಗಿಲ್ಲ.
‘catzmemezzz’ ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು 3 ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದು 1.12 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.