ವರ್ಗಾವಣೆಗೊಂಡ ಅಧಿಕಾರಿ ಪಾರ್ಟಿಯಲ್ಲಿ ಮಹಿಳೆ ಅಶ್ಲೀಲ ನೃತ್ಯ: ತನಿಖೆಗೆ ಆದೇಶ

ಪಾಟ್ನಾ: ಬಿಹಾರದಲ್ಲಿ ಅಧಿಕಾರಶಾಹಿಗೆ ಮುಜುಗರ ಉಂಟು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬಿಹಾರದ ಖಗಾರಿಯಾದಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ ಗೆ(ಬಿಡಿಒ) ಆಯೋಜಿಸಿದ್ದ ಬೀಳ್ಕೊಡುಗೆ ‘ಪಾರ್ಟಿ’ಯಲ್ಲಿ ಮಹಿಳೆ ಅಶ್ಲೀಲ ನೃತ್ಯ ಮಾಡಿದ್ದಾರೆ.

ಅಧಿಕಾರಿಯನ್ನು ವರ್ಗಾವಣೆ ಮಾಡಿದ ಕಾರಣ ಬೀಳ್ಕೊಡುಗೆ ನೀಡಿ ಪಾರ್ಟಿ ಮಾಡಲಾಗಿದೆ. ಈ ವೇಳೆ ಮಹಿಳೆಯ ಅಶ್ಲೀಲ ನೃತ್ಯ ಚರ್ಚೆಯ ವಿಷಯವಾಗಿದೆ. ಬಾರ್ ಗರ್ಲ್ಸ್ ವಿದಾಯ ಪಾರ್ಟಿಯಲ್ಲಿ ಭೋಜ್‌ಪುರಿ ಹಾಡಿನಲ್ಲಿ ಆಶ್ಲೀಲ ನೃತ್ಯ ಮಾಡಿದ್ದಾರೆ.

ಬಿಡಿಒ ಸುನೀಲ್ ಕುಮಾರ್ ಅವರನ್ನು ಬೀಳ್ಕೊಡುವ ಸಲುವಾಗಿ ಬೆಲ್ದೌರ್ ಬ್ಲಾಕ್ ಆವರಣದಲ್ಲಿ ಆರ್ಕೆಸ್ಟ್ರಾ ಪಾರ್ಟಿ ಆಯೋಜಿಸಲಾಗಿತ್ತು. ಬಾರ್ ಗರ್ಲ್ಸ್ ನೃತ್ಯ ಪ್ರದರ್ಶನ ನೀಡಿದ್ದಾರೆ. ಪಾರ್ಟಿಯಲ್ಲಿ ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಕುಣಿದು ಕುಪ್ಪಳಿಸಿದ್ದಾರೆ. ನೃತ್ಯ ಪಾರ್ಟಿ ಆಯೋಜಿಸಲು ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.

ವಿಡಿಯೋ ವೈರಲ್ ಆದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋ ಜುಲೈ 12ರದ್ದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read