ಮಾವಿನ ಹಣ್ಣಿನ ಸೀಸನ್ ಇದು. ಯಾವುದೇ ಹಣ್ಣಿನ ಅಂಗಡಿಗೆ ಹೋದ್ರೂ ಈಗ ಮಾವಿನಹಣ್ಣು ಕಾಣಸಿಗುತ್ತೆ. ಸೀಸನ್ ನಲ್ಲಿ ಮಾವಿನ ಹಣ್ಣಿನ ರುಚಿ ನೋಡದವರೇ ಇಲ್ಲ. ವಿಭಿನ್ನ ರುಚಿ, ವಿವಿಧ ತಳಿಗಳು ಲಭ್ಯವಿರುತ್ತವೆ.
ಆಹಾರ ಮೇಳದಂತೆ ಈ ಸೀಸನ್ ನಲ್ಲಿ ಮಾವಿನ ಮೇಳ ಸದ್ದು ಮಾಡ್ತಿದ್ದು ಜನ ಮುಗಿಬಿದ್ದಿದ್ದಾರೆ. ಬಿಹಾರದಲ್ಲಿ 2 ದಿನಗಳ ಕಾಲ ಮಾವು ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯು ಬಿಹಾರದ ಪಾಟ್ನಾದಲ್ಲಿ ರಾಜ್ಯ ಮಟ್ಟದ ಮಾವು ಉತ್ಸವದ ಭಾಗವಾಗಿತ್ತು. ಜ್ಞಾನ ಭವನದಲ್ಲಿ ಎರಡು ದಿನ ನಡೆದ ಮಾವು ಉತ್ಸವ ಕಮ್ ಸ್ಪರ್ಧೆಯಲ್ಲಿ ವಿವಿಧ ತಳಿಯ ಮಾವು ಪ್ರದರ್ಶನಗೊಂಡಿತ್ತು.
ಈ ಮಧ್ಯೆ ಬಿಹಾರದ ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾ ಪ್ರದೇಶದಲ್ಲಿ ಮಾವು ತಿನ್ನುವ ಸ್ಪರ್ಧೆ ನಡೆಯಿತು. ‘ಆಮ್ ಖಾವೋ ಇನಾಮ್ ಪಾವೋ’ ಎಂಬುದು ಸ್ಪರ್ಧೆಯ ಅಡಿಬರಹವಾಗಿತ್ತು. AIR ನ್ಯೂಸ್ ಹಂಚಿಕೊಂಡಿರುವ ವೀಡಿಯೊದಲ್ಲಿ ಅನೇಕ ಸ್ಪರ್ಧಿಗಳು ನಿರ್ದಿಷ್ಟ ಸಮಯದೊಳಗೆ ತ್ವರಿತವಾಗಿ ಮಾವಿನಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಅವರೆಲ್ಲರೂ ರಸಭರಿತವಾದ ಹಣ್ಣನ್ನು ತಿಂದು ಬಹುಮಾನ ಗೆಲ್ಲಲು ಮುಂದಾಗಿದ್ದರು.
https://twitter.com/airnews_patna/status/1669776947138924545?ref_src=twsrc%5Etfw%7Ctwcamp%5Etweetembed%7Ctwterm%5E1669776947138924545%7Ctwgr%5Ea6ac0c951ebfccd6ea7fe945b339ee9b4205177c%7Ctwcon%5Es1_&ref_url=https%3A%2F%2Ffood.ndtv.com%2Fnews%2Fwait-what-video-of-mango-eating-contest-in-bihar-intrigues-internet-4131787
https://twitter.com/airnews_patna/status/1669992335915225089?ref_src=twsrc%5Etfw%7Ctwcamp%5Etweetembed%7Ctwterm%5E1669992335915225089%7Ctwgr%5Ea6ac0c951ebfccd6ea7fe945b339ee9b4205177c%7Ctwcon%5Es1_&ref_url=https%3A%2F%2Ffood.ndtv.com%2Fnews%2Fwait-what-video-of-mango-eating-contest-in-bihar-intrigues-internet-4131787
https://twitter.com/airnews_patna/status/1669994508522749953?ref_src=twsrc%5Etfw%7Ctwcamp%5Etweetembed%7Ctwterm%5E1669994508522749953%7Ctwgr%5Ea6ac0c951ebfccd6ea7fe945b339ee9b4205177c%7Ctwcon%5Es1_&ref_url=https%3A%2F%2Ffood.ndtv.com%2Fnews%2Fwait-what-video-of-mango-eating-contest-in-bihar-intrigues-internet-4131787