ಭಾವುಕರನ್ನಾಗಿಸುತ್ತೆ ವೃದ್ಧ ಪತಿಗೆ ತುತ್ತು ನೀಡುತ್ತಿರುವ ಪತ್ನಿ ವಿಡಿಯೋ

ವಯಸ್ಸಾದ ಮಹಿಳೆಯೊಬ್ಬರು ತಮ್ಮ ಕೈಯಿಂದಲೇ ಪತಿಗೆ ಆಹಾರ ನೀಡುತ್ತಿರುವ ವಿಡಿಯೋ ಒಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ನೋಡುಗರನ್ನು ಭಾವುಕರನ್ನಾಗಿಸುತ್ತದೆ. ನಿಜವಾದ ಪ್ರೀತಿಯಲ್ಲಿ ನಂಬುವಂತೆ ಮಾಡುತ್ತದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಅಬಾ ಜಿಯೋನ್ ಎಂಬ ಆನಿಮೇಟರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ, ವಯಸ್ಸಾದ ಮಹಿಳೆ ತನ್ನ ಪತಿಯೊಂದಿಗೆ ಸಮಾರಂಭವೊಂದರಲ್ಲಿ ಇರುವುದನ್ನು ಕಾಣಬಹುದಾಗಿದೆ. ಆಕೆ ತನ್ನ ಕೈಗಳಿಂದ ಪತಿಗೆ ಆಹಾರವನ್ನು ನೀಡುತ್ತಿದ್ದು ಈ ಕ್ಷಣ ತುಂಬಾ ಅಮೂಲ್ಯವಾಗಿದೆ.

ಇದು ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಭಾವುಕರಾಗಿದ್ದಾರೆ. ಮಕ್ಕಳು, ಮೊಮ್ಮಕ್ಕಳು ಯಾರೇ ಇರಲಿ……. ಜೀವನದ ಸಂಧ್ಯಾಕಾಲದಲ್ಲಿ ಪತಿಗೆ ಪತ್ನಿ, ಪತ್ನಿಗೆ ಪತಿಯೇ ಆಶ್ರಯ ಎನ್ನುವುದನ್ನು ಇದು ಸಾಬೀತು ಮಾಡುತ್ತದೆ ಎಂದಿದ್ದಾರೆ. ಅದರಲ್ಲಿಯೂ ಜೀವನ ಪೂರ್ತಿ ಬೇರೆಯವರಿಗಾಗಿಯೇ ಜೀವನ ಮೀಸಲು ಇಡುವ ಅದೆಷ್ಟೋ ತಾಯಂದಿರಲ್ಲಿ ಈಕೆ ಕೂಡ ಒಬ್ಬರು ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

https://youtu.be/v_GgjDvsM6g

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read