BREAKING: ಮುಂಬೈನಲ್ಲಿ ಭಾರೀ ಮಳೆಯಿಂದ ಕೆಟ್ಟು ನಿಂತ ಮೋನೋ ರೈಲು: ಪ್ರಯಾಣಿಕರ ಕೆಳಗಿಳಿಸಲು ಕಾರ್ಯಾಚರಣೆ | VIDEO

ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗಿದೆ. ಒಂದೇ ದಿನದಲ್ಲಿ 300 ಮಿಮೀ ಮಳೆಯಾಗಿದ್ದು, ಮುಂದಿನ 48 ಗಂಟೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ನಡುವೆ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಮೋನೋ ರೈಲು ಹಾಳಾಗಿದೆ. ತಾಂತ್ರಿಕ ದೋಷದಿಂದ ಮೋನೋ ರೈಲು ಸ್ಟಕ್ ಆಗಿ ನಿಂತಿದ್ದು, ಪ್ರಯಾಣಿಕರು 2 ಗಂಟೆಗೂ ಅಧಿಕ ಕಾಲ ಸಿಲುಕಿಕೊಂಡಿದ್ದಾರೆ.

ನಗರದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮೋನೋರೈಲು ಸೇವೆಗಳು ಸ್ಥಗಿತಗೊಂಡವು. ಚೆಂಬೂರ್ ಮತ್ತು ಭಕ್ತಿ ಪಾರ್ಕ್ ನಡುವೆ ಸಂಜೆ 6.15 ರ ಸುಮಾರಿಗೆ ಈ ಅಡಚಣೆ ಉಂಟಾಗಿದ್ದು, ಪ್ರಸ್ತುತ ಬಹಳಷ್ಟು ಪ್ರಯಾಣಿಕರು ರೈಲು ಹಳಿಯೊಳಗೆ ಸಿಲುಕಿಕೊಂಡಿದ್ದಾರೆ.

ಪ್ರಯಾಣಿಕರು ತಕ್ಷಣ ತುರ್ತು ಸಹಾಯಕ್ಕಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡಿದ್ದಾರೆ. ತುರ್ತು ಕರೆಯ ನಂತರ, ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೂರು ಸ್ನಾರ್ಕೆಲ್ ವಾಹನಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಇತ್ತೀಚಿನ ವರದಿಗಳ ಪ್ರಕಾರ, ಹಲವಾರು ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದಾರೆ ಮತ್ತು ರಕ್ಷಣೆಗಾಗಿ ಕಾಯುತ್ತಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲು ಕಾರ್ಯಾಚರಣೆ ಮುಂದುವರೆಸಲಾಗಿದೆ.

ವಿದ್ಯುತ್ ಸರಬರಾಜು ಸಮಸ್ಯೆಯಿಂದಾಗಿ ಮುಂಬೈನ ಮೈಸೂರು ಕಾಲೋನಿ ನಿಲ್ದಾಣದ ಬಳಿ ಸಿಲುಕಿಕೊಂಡಿದ್ದ ಮೋನೋರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read