ಕೈಗಾರಿಕೋದ್ಯಮಿ ಮತ್ತು ಆರ್ ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ತಮ್ಮ ಕುನೂರ್ ಮನೆಯ ಹೊರಗೆ ಚಿರತೆ ಮತ್ತು ಕಪ್ಪು ಪ್ಯಾಂಥರ್ ಕಾಣಿಸಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪ್ರಾಣಿಗಳು ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೈಗಾರಿಕೋದ್ಯಮಿಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಈ ಪ್ರಾಣಿಗಳು ಮನೆ ಮುಂದೆ ಅಡ್ಡಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ನಾವು ಅವರ ಪ್ರದೇಶದಲ್ಲಿ ಅತಿಥಿಗಳು ಎಂಬುದನ್ನು ಇದು ನೆನಪಿಸುತ್ತದೆಂದು ಅವರು ಶೀರ್ಷಿಕೆ ಹಾಕಿದ್ದಾರೆ. RespectNature ಹ್ಯಾಶ್‌ಟ್ಯಾಗ್‌ನೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಅದ್ಭುತ ಪ್ರಾಣಿಯನ್ನು ಕೂನೂರಿನಲ್ಲಿರುವ ನಮ್ಮ ಮನೆಯ ಹೊರಗೆ ನೋಡಲಾಗಿದೆ. ನಾವು ಅವರ ಪ್ರಾಂತ್ಯದಲ್ಲಿ ಅತಿಥಿಗಳು ಎಂಬುದನ್ನು ಇದು ನಮಗೆ ನೆನಪಿಸುತ್ತದೆ ಎಂದು ಹರ್ಷ್ ಬರೆದಿದ್ದಾರೆ.
ಜುಲೈ 30ರ ಸಂಜೆಯ ವಿಡಿಯೋ ಎಂಬುದು ಸಿಸಿ ಟಿವಿ ದೃಶ್ಯಾವಳಿಗಳಿಂದ ತಿಳಿದು ಬಂದಿದೆ. ವಿಡಿಯೋದಲ್ಲಿ ಕೈಗಾರಿಕೋದ್ಯಮಿಯ ಮನೆಯ ಹೊರಗಿನ ರಸ್ತೆಯಲ್ಲಿ ಚಿರತೆಯೊಂದು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಗೇಟ್ ಸಹ ಕಾಣಿಸ್ತಿದೆ. ಚಿರತೆ ಮುಂದೆ ಚಲಿಸುತ್ತಿದೆ. ಕಪ್ಪು ಪ್ಯಾಂಥರ್ ಹಿಂದಿದೆ.
This majestic creature was spotted outside our Coonoor home. A reminder that we are guests in their territory. #RespectNature pic.twitter.com/NaNAi1NnPy
— Harsh Goenka (@hvgoenka) August 4, 2024