Viral Video | ನಡುರಸ್ತೆಗೆ ಬಂದ ಬೃಹತ್ ಮೊಸಳೆ ಕಂಡು ಬೆಚ್ಚಿಬಿದ್ದ ವಾಹನ ಸವಾರರು

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ನಲ್ಲಿ ಮೊಸಳೆ ಕಾಣಿಸಿಕೊಂಡು ವಾಹನ ಸವಾರರನ್ನು ಬೆಚ್ಚಿಬೀಳಿಸಿದೆ.
ಸಂಚಾರ ದಟ್ಟಣೆಯ ರಸ್ತೆಯಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಹೋಗುತ್ತಿರುವುದನ್ನು ಕಂಡು ಪ್ರಯಾಣಿಕರು ಅಚ್ಚರಿಗೊಂಡಿದ್ದು, ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ.

ಪ್ರತ್ಯಕ್ಷದರ್ಶಿಗಳ ವರದಿಗಳ ಪ್ರಕಾರ ಮೊಸಳೆಯು ರಸ್ತೆಯ ಉದ್ದಕ್ಕೂ ಚಲಿಸುತ್ತಿರುವುದು ಕಂಡುಬಂದಿದೆ. ಇದು ನಿವಾಸಿಗಳು ಮತ್ತು ದಾರಿಹೋಕರಿಗೆ ಅಚ್ಚರಿ ಮತ್ತು ಭಯ ಮೂಡಿಸಿದೆ. ಇದಕ್ಕೂ ಮುನ್ನ ಸ್ಥಳೀಯರು ಚಿಪ್ಲುನ್‌ನ ಜಲಮಾರ್ಗಗಳಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಅಥವಾ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಲು ಇನ್ನೂ ಸಹ ಮುಂದಾಗಿಲ್ಲ. ಆದರೆ ನಿವಾಸಿಗಳು ಜಾಗರೂಕರಾಗಿರಲು ಮತ್ತು ಮೊಸಳೆಗಳು ಕಂಡುಬಂದ ದೃಶ್ಯಗಳನ್ನು ತಕ್ಷಣದ ಕ್ರಮಕ್ಕಾಗಿ ಸ್ಥಳೀಯ ವನ್ಯಜೀವಿ ಅಧಿಕಾರಿಗಳಿಗೆ ವರದಿ ಮಾಡಲು ತಿಳಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕ ಶನಿವಾರ ಮೊಸಳೆ ದಾಳಿಯಿಂದ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ. ಪೊಲೀಸರ ವರದಿಗಳ ಪ್ರಕಾರ ಬಹಿರ್ದೆಸೆಗೆಂದು ಹೋಗಿದ್ದ ಬಾಲಕನ ಮೇಲೆ ನದಿಯಲ್ಲಿದ್ದ ಮೊಸಳೆ ದಾಳಿ ಮಾಡಿ ಎಳೆದೊಯ್ದಿದೆ. ಸ್ಥಳೀಯ ನಿವಾಸಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಶೋಧ ಕಾರ್ಯಾಚರಣೆ ವೇಳೆ ಬಾಲಕನ ದೇಹವು ಮಹಾನದಿ ದಡದ ಮತ್ತೊಂದು ಸ್ಥಳದಲ್ಲಿ ಪತ್ತೆಯಾಗಿದೆ.

ಘಟನೆಗೆ ಪ್ರತಿಕ್ರಿಯಿಸಿದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದು ಮೃತನ ಕುಟುಂಬ ಸದಸ್ಯರಿಗೆ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read