Video: ಪೂಜಾ ಸ್ಥಳದಲ್ಲಿ ಗುಟ್ಕಾ ಉಗುಳಿದ ಕಾರ್ಮಿಕ; ಬಾಯಿಗೆ ಸಗಣಿ ಮೆತ್ತಿದ ಯುವಕರು…!

ಮಧ್ಯಪ್ರದೇಶದ ಧಾರ್‌ನಲ್ಲಿ ಗೋವರ್ಧನ ಪೂಜೆಯ ವೇಳೆ ಕಾರ್ಮಿಕರೊಬ್ಬರನ್ನು ಕೆಲ ಯುವಕರು ಥಳಿಸಿ, ಬಲವಂತವಾಗಿ ಹಸುವಿನ ಸಗಣಿ ತಿನ್ನಿಸಿದ್ದಾರೆ. ಪೂಜಾ ಸ್ಥಳದಲ್ಲಿ ತಂಬಾಕು ಉಗುಳಿದ್ದಾನೆ ಎಂಬ ಕಾರಣಕ್ಕೆ ಈ ಕೆಲಸ ಮಾಡಿರುವುದಾಗಿ ಯುವಕರು ಹೇಳಿದ್ದಾರೆ.

ಇಮ್ರಾನ್ ಖಾನ್ ಎಂದು ಗುರುತಿಸಲಾದ 20 ವರ್ಷದ ಕಾರ್ಮಿಕನನ್ನು ಸಿಆರ್‌ಪಿಸಿ 151 ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಪ್ರಶಾಂತ್ ಪಾಲ್ ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಗುಂಪು ಆತನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತಿದೆ.

ಮಾಹಿತಿಯ ಪ್ರಕಾರ, ನವೆಂಬರ್ 2 ರಂದು ಧಾರ್‌ನ ಸಾಗೌರ್ ಪ್ರದೇಶದಲ್ಲಿ ಗೋವರ್ಧನ ಪೂಜೆಯ ಸಮಯದಲ್ಲಿ ಕೆಲವರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಘಟನೆ ನಡೆದಿದೆ. 20 ವರ್ಷದ ಇಮ್ರಾನ್, ತಂಬಾಕು ಜಗಿಯುತ್ತಾ, ರಸ್ತೆ ಬದಿಯಲ್ಲಿ ಹೋಗುತ್ತಿದ್ದು, ಅವನ ಉಗುಳಿನ ಕೆಲವು ಹನಿಗಳು ಪಕ್ಕದ ವೇದಿಕೆಯ ಪೂಜಾ ಸ್ಥಳದ ಮೇಲೆ ಬಿದ್ದಿದೆ.

ಇದು ಪೂಜೆ ಸಲ್ಲಿಸುತ್ತಿದ್ದ ಭಕ್ತರನ್ನು ಕೆರಳಿಸಿದ್ದು, ಅವರೆಲ್ಲರೂ ಅವನನ್ನು ನಿಂದಿಸಿದ್ದಾರೆ. ಕೆಲವು ಯುವಕರು, ಅವನ ಕೊರಳಪಟ್ಟಿ ಹಿಡಿದು ಪೂಜಾ ಸ್ಥಳದಿಂದ ಉಗುಳುವ ಹನಿಗಳನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ ಅಲ್ಲದೇ ಶಿಕ್ಷೆಯಾಗಿ ಹಸುವಿನ ಸಗಣಿಯನ್ನು ಬಾಯಿಗೆ ಮೆತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read