Video: ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯನ್ನು ಸಮರ್ಥಿಸಿಕೊಂಡ ಕೇರಳ ಲೇಖಕಿ; ನೆಟ್ಟಿಗರ ತೀವ್ರ ಆಕ್ರೋಶ

ಕೇರಳದ ತಿರುವನಂತಪುರ ಮೂಲದ ಲೇಖಕಿ ಆಶ್ಲಿನ್ ಜಿಮ್ಮಿ ಭಾರತದ ವಿರುದ್ಧ ಪಾಕಿಸ್ತಾನದ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿದ್ದು ವಿವಾದ ಹುಟ್ಟುಹಾಕಿದ್ದಾರೆ.

ವರದಿಗಳ ಪ್ರಕಾರ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆಗೆ ನಟಿಸಲು ಅವಕಾಶ ಸಿಗದ ಕಾರಣ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಸಮರ್ಥಿಸುವ ಆಕೆಯ ವಿಡಿಯೋವೊಂದು ವೈರಲ್ ಆಗಿದೆ.

ಲೇಖಕಿ ಆಶ್ಲಿನ್ ಜಿಮ್ಮಿ ಪ್ರಕಾರ, ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ನಾಯಕಿಯಾಗುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಹತಾಶೆ ತೋರಿಸಿದ್ದಾಳೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಗೆ ನಾಯಕಿಯಾಗುವ ಅವಕಾಶ ಸಿಗದ ಕಾರಣ ಮುಂಬೈ ಸರಿಯಿಲ್ಲ ಎಂದು ಟೀಕಿಸಿದ್ದಾಳೆ.

ಆಕೆಯ ಹೇಳಿಕೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಆಕೆಯ ಸಂದರ್ಶನವನ್ನು ವೀಕ್ಷಿಸಿದ ಅನೇಕರು ಲೇಖಕಿಯ ಸಂವೇದನಾರಹಿತ ಹೇಳಿಕೆಗಳಿಗಾಗಿ ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಅತಿರೇಕದ ಮಾತುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

DISCLAIMER- Kannada Dunia does not verify the viral video or the claim that the person in the video is Ashlin Jimmy.

https://twitter.com/erbmjha/status/1803647201605984266?ref_src=twsrc%5Etfw%7Ctwcamp%5Etweetembed%7Ctwterm%5E1803647201605984266%7Ctwgr%5E4053fd68f052ab8c7ace43ae5b33456adafea53a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideokeralawomanjustifiesmumbaiterrorattackoutragednetizensdemandactionagainsther-newsid-n618600115

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read