ಪಾರ್ಟಿ ನಡೆಯುವಾಗಲೇ ‘ಪ್ಯಾರಾಗ್ಲೈಂಡಿಂಗ್’ ಮೂಲಕ ತಂಡೋಪತಂಡವಾಗಿ ಬಂದಿಳಿದ ಹಮಾಸ್‌ ಉಗ್ರರು; ಶಾಕಿಂಗ್ ವಿಡಿಯೋ ವೈರಲ್

Video | Hamas militants paraglide into Israeli 'rave party,' partygoers keep dancing unaware

ಇಸ್ರೇಲ್ ನಲ್ಲಿ ಹಮಾಸ್ ಭಯೋತ್ಪಾದಕರು ನಡೆಸುತ್ತಿರುವ ದಾಳಿಯ ಭಯಾನಕ ವಿಡಿಯೋಗಳು ಒಂದೊಂದಾಗಿ ಹೊರಬರುತ್ತಿವೆ. ಈ ದಾಳಿಗೆ ಅವರು ಬಹಳ ದಿನಗಳಿಂದಲೇ ತಯಾರಿ ನಡೆಸಿದ್ದರು ಎಂಬುದನ್ನೂ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಭಯಾನಕ ವಿಡಿಯೋಗಳು ತೋರಿಸಿವೆ.

ಇಸ್ರೇಲ್ ನ ಗಾಜಾ ಪಟ್ಟಿಗೆ ಸಮೀಪವಿರುವ ಕಿಬ್ಬುಟ್ಜ್ ರೆಯಿಮ್ ಬಳಿ ನಡೆದ ರೇವ್ ಪಾರ್ಟಿ‌ ವೇಳೆ ಪ್ಯಾಲೆಸ್ತೀನ್ ನ ಹಮಾಸ್ ಉಗ್ರಗಾಮಿಗಳು ಮೋಟಾರು ಪ್ಯಾರಾಗ್ಲೈಡರ್‌ಗಳ ಸಹಾಯದಿಂದ ದಾಳಿ ಮಾಡಿದ್ರು. ದಾಳಿಯಿಂದಾಗಿ ಪಾರ್ಟಿ ಅವ್ಯವಸ್ಥೆಯ ದೃಶ್ಯವಾಗಿ ಮಾರ್ಪಟ್ಟಿತು. ಸಾಮಾಜಿಕ ಮಾಧ್ಯಮದಲ್ಲಿನ ವೈರಲ್ ವೀಡಿಯೊದಲ್ಲಿ ಜನರು ಪಾರ್ಟಿಯಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿರುವುದನ್ನ ತೋರಿಸಿದೆ.

ದಾಳಿಯ ವೇಳೆ ಉಗ್ರಗಾಮಿಗಳು ಅನೇಕ ಜನರನ್ನು ಕೊಂದು ಕೆಲವರನ್ನು ಒತ್ತೆಯಾಳಾಗಿ ಇಟ್ಟುಕೊಂಡರು. ಇದಕ್ಕೂ ಮೊದಲು ಹಮಾಸ್ ತನ್ನ ಉಗ್ರಗಾಮಿಗಳು ಪ್ಯಾರಾಗ್ಲೈಡರ್‌ಗಳನ್ನು ಬಳಸಿ ಟೇಕಾಫ್ ಮತ್ತು ಲ್ಯಾಂಡ್ ಮಾಡಲು ತರಬೇತಿ ನೀಡುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

ಆರಂಭಿಕ ರಾಕೆಟ್ ದಾಳಿಯ ನಂತರ ಜನಸಂದಣಿಯ ಮೇಲೆ ಗುಂಡು ಹಾರಿಸಲಾಯಿತು. ಇದರಿಂದಾಗಿ ನೂರಾರು ಮಂದಿ ಪಾರ್ಟಿಯಲ್ಲಿ ಭಯಭೀತರಾಗಿ ಪಲಾಯನ ಮಾಡಲು ಪ್ರಯತ್ನಿಸಿದರು.

ಪ್ಯಾರಾಗ್ಲೈಡರ್ ಒಳನುಗ್ಗುವಿಕೆಯೊಂದಿಗೆ ಹಮಾಸ್ ಭಯೋತ್ಪಾದಕರು 150-ಚದರ ಮೈಲಿ ಗಾಜಾ ಪಟ್ಟಿಯ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ವಿವಿಧ ಕಡೆಯಿಂದ ಇಸ್ರೇಲ್ ಪ್ರವೇಶಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read