ರಾತ್ರಿ ವೇಳೆ ಮನೆ ಬಾಗಿಲು ತಟ್ಟಿದಾಗ ಇರಲಿ ಎಚ್ಚರ…! ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ

ಮುಸುಕುಧಾರಿಗಳ ಗುಂಪೊಂದು ಹೈದರಾಬಾದ್‌ನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ, ಮೊಬೈಲ್ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದೆ.

ದುಷ್ಕರ್ಮಿಗಳು ಮನೆ ಪ್ರವೇಶಿಸಲು ಸಂತ್ರಸ್ತರ ಸಂಬಂಧಿಯನ್ನು ಬಳಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಅಪಾರ್ಟ್‌ಮೆಂಟ್‌ನೊಳಗೆ ನಡೆದ ದಾಳಿಯಲ್ಲಿ ಉದ್ಯಮಿಯನ್ನು ಗಾಯಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆಯ ವೀಡಿಯೊದಲ್ಲಿ ದರೋಡೆಕೋರರು ಅವರ ಸಂಬಂಧಿಯನ್ನು ಹಿಡಿದು ಹೆಸರು ಕೂಗಿಸಿ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆದ ಕೂಡಲೇ ಅವರ ಹಿಂದೆ ಅಡಗಿಕೊಂಡಿದ್ದ ದರೋಡೆಕೋರರು ಮನೆಯೊಳಗೆ ಪ್ರವೇಶಿಸಿದ್ದಾರೆ. ಎಲ್ಲರೂ ಒಳಗೆ ಹೋದಾಗ, ಅವರಲ್ಲಿ ಒಬ್ಬ ಅಲ್ಲಿ ಏನಾದರೂ ಸಂಭವಿಸಿದರೆ ತನ್ನ ಸಹಚರರನ್ನು ಎಚ್ಚರಿಸಲು ಹೊರಗೆ ನಿಂತಿದ್ದಾನೆ.

ಅವರ ಬಳಿ ಕುಡುಗೋಲು, ಪಿಸ್ತೂಲ್ ಮುಂತಾದ ಆಯುಧಗಳೂ ಇದ್ದವು ಎನ್ನಲಾಗಿದ್ದು, ಕಳ್ಳತನ ಮಾಡಿದ ನಂತರ ಸಿಸಿ ಟಿವಿಯ ಡಿವಿಆರ್ ಸಮೇತ ತೆರಳಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read