‘ಟಗರು ಪಲ್ಯ’ ಚಿತ್ರತಂಡದಿಂದ ಇಂದು ವಿಜಯ ಯಾತ್ರೆ

ಅಕ್ಟೋಬರ್ 27ರಂದು ರಾಜ್ಯದಾದ್ಯಂತ ತೆರೆಕಂಡಿದ್ದ ‘ಟಗರು ಪಲ್ಯ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ಫ್ಯಾಮಿಲಿ ಸಮೇತ ಬಂದು ವೀಕ್ಷಿಸುತ್ತಿದ್ದಾರೆ. ಚಿತ್ರದಂಡ ಇದೀಗ ಈ ಸಂತಸವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ವಿಜಯ ಯಾತ್ರೆ ಹಮ್ಮಿಕೊಂಡಿದೆ.

ಶ್ರೀ ಆದಿಶಕ್ತಿ ಶಿವನಸಮುದ್ರ ಶಿಂಷಾ ಮಾರಮ್ಮ ದೇವಿ ದೇವಸ್ಥಾನದಲ್ಲಿ ಈಗಾಗಲೇ ಪೂಜೆ ಸಲ್ಲಿಸಿದ್ದು, 10:30ಕ್ಕೆ ಬೆಳಕವಾಡಿಯ ಬೀರೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 1:00 ಗಂಟೆಗೆ ಕೊಳ್ಳೇಗಾಲದ ಶ್ರೀನಿವಾಸ ಚಿತ್ರಮಂದಿರ ಹಾಗೂ ಸಂಜೆ 4:00 ಗಂಟೆಗೆ ಮಳವಳ್ಳಿಯ ರಾಜರಾಜೇಶ್ವರಿ ಚಿತ್ರಮಂದಿರ ಸೇರಿದಂತೆ ಮಂಡ್ಯ ಹಾಗೂ ಮೈಸೂರು ಥಿಯೇಟರ್ಗಳಿಗೆ ಭೇಟಿ ನೀಡಲಿದ್ದಾರೆ.

ಉಮೇಶ್ ಕೆ ಕೃಪ ನಿರ್ದೇಶನದ ಈ ಚಿತ್ರದಲ್ಲಿ ನಾಗಭೂಷಣ ಮತ್ತು ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿದ್ದು, ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read