BREAKING NEWS: ಜನಪ್ರಿಯ ಹಾಸ್ಯ ನಟ ಮೈಲ್ ಸಾಮಿ ದಿಢೀರ್ ನಿಧನ

ಜನಪ್ರಿಯ ಹಾಸ್ಯ ನಟ ಆರ್ ಮೈಲ್‌ ಸಾಮಿ ಫೆಬ್ರವರಿ 19 ರಂದು ಭಾನುವಾರ ಮುಂಜಾನೆ ನಿಧನರಾದರು. ಅವರು ಆರೋಗ್ಯ ತೊಂದರೆ ಅನುಭವಿಸುತ್ತಿದ್ದರು. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃಪಟ್ಟಿದ್ದಾರೆ.

ಮೈಲ್ ಸ್ವಾಮಿ ಅವರಿಗೆ 57 ವರ್ಷವಾಗಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಸುದ್ದಿಯನ್ನು ದೃಢಪಡಿಸಿದ್ದಾರೆ. ಮೈಲ್‌ ಸಾಮಿ ಶನಿವಾರ ಅಸ್ವಸ್ಥರಾಗಿದ್ದು, ಕುಟುಂಬದವರು ಅವರನ್ನು ಪೋರೂರು ರಾಮಚಂದ್ರ ಆಸ್ಪತ್ರೆಗೆ ಕರೆದೊಯ್ದರು. ದಾರಿಯಲ್ಲಿಯೇ ಅವರು ತೀರಿಕೊಂಡರು. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮೈಲ್‌ ಸಾಮಿ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಮೆಚ್ಚುಗೆ ಪಡೆದ ವೇದಿಕೆ ಪ್ರದರ್ಶಕ, ಸ್ಟ್ಯಾಂಡ್-ಅಪ್ ಹಾಸ್ಯನಟ, ಟಿವಿ ನಿರೂಪಕ ಮತ್ತು ರಂಗಭೂಮಿ ಕಲಾವಿದರಾಗಿದ್ದರು. ಅವರು ಜನಪ್ರಿಯ ಹಾಸ್ಯ ಕಾರ್ಯಕ್ರಮದ ನಿರೂಪಕ ಮತ್ತು ತೀರ್ಪುಗಾರರಾಗಿ ತಮಿಳು ದೂರದರ್ಶನದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು.

1984 ರಲ್ಲಿ ಬಿಡುಗಡೆಯಾದ ಹಿರಿಯ ಚಲನಚಿತ್ರ ನಿರ್ಮಾಪಕ-ನಟ ಕೆ. ಭಾಗ್ಯರಾಜ್ ಅವರ ‘ಧವನಿ ಕನವುಗಲ್‌’ ನಲ್ಲಿ ಮೊದಲ ಬಾರಿಗೆ ನಟಿಸಿದರು.

https://twitter.com/rameshlaus/status/1627114386266652672

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read